ಎಡಪದವು 15ನೇ ವರ್ಷದ ಗಣೇಶೋತ್ಸವ ಸಂಭ್ರಮ, ಗಣಪತಿಗೆ ಬೆಳ್ಳಿ ಕಿರೀಟ ಅರ್ಪಿಸಿದ ಸಮಿತಿ
ದಕ್ಷಿಣ ಕನ್ನಡದಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ, ಎಲ್ಲ ಕಡೆ ಗಣೇಶ್ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಇದೀಗ ಆ ಎಲ್ಲ ಸಂಭ್ರಮಕ್ಕೆ ಕ್ಷಣಗಣನೆ ಹೆಚ್ಚಾಗಿದೆ. ಇದೀಗ ಎಡಪದವಿನ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಗಣೇಶ ಹಬ್ಬ ಕಲೆಗಟ್ಟಿದೆ. ಇದೀಗ ಶ್ರೀ ಎಡಪದವು ಗಣೇಶೋತ್ಸವ ಸೇವಾ ಸಮಿತಿ ಎಡಪದವು ಈ ಸಂಭ್ರಮಕ್ಕೆ ಸಿದ್ಧತೆಯನ್ನು ನಡೆಸಿದೆ. ಇದಕ್ಕೂ ಮುನ್ನ ಗಣೇಶನ ಕಿರೀಟದ ಬೃಹತ್ ಶೋಭಾಯಾತ್ರೆ ನಡೆಯಿತು.
ಶ್ರೀ ಎಡಪದವು ಗಣೇಶೋತ್ಸವ ಸೇವಾ ಸಮಿತಿಯು 15ನೇ ವರ್ಷದ ಗಣೇಶೋತ್ಸವದ ಗಣೇಶನ ಕಿರೀಟವನ್ನು ಗುರುನಾರಾಯಣ ಮಂದಿರದಿಂದ ರಾಮಮಂದಿರ ಮತ್ತು ಹನುಮಾನ್ ಮಂದಿರದ ಮೂಲಕ ಶ್ರೀ ಕ್ಷೇತ್ರಕ್ಕೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ತರಲಾಯಿತು.
ಇನ್ನು ಈ ಯಾತ್ರೆಯಲ್ಲಿ ಎಡಪದವು ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರು ಧನಂಜಯ ಮೇಸ್ತ್ರಿ, ಉಪಾಧ್ಯಕ್ಷರು ಜಯರಾಮ್ ಕೋಟ್ಯಾನ್, ಮುರಳಿಧರ್ ಕೋಟ್ಯಾನ್, ಗಂಗಾಧರ ಸುವರ್ಣ ಗೌರವಧ್ಯಕ್ಷರಾದ ಸಂಜೀವ ಶೆಟ್ಟಿ ಎಡಪದವು, ಜೊತೆಕಾರ್ಯದರ್ಶಿ ಯೋಗಿಶ್ ಸನಿಲ್, ಕೋಶಾಧಿಕಾರಿ ಗಂಗಾಧರ ಪೂಜಾರಿ ಕುಂಡೋಡಿ, ಗೌರವ ಸಲಹೆಗಾರರು ಗಗನ್ ಟಿವಿ ಭಾಸ್ಕರ್ ಪೂಜಾರಿ ಪಾಡ್ಯರ್ ಭಾಗವಹಿಸಿದರು.
ಇನ್ನು ಕಾರ್ಯಕಾರಿ ಸಮಿತಿಯ ಸದಸ್ಯರು ಉಮೇಶ್ ದೇವಾಡಿಗ, ವಸಂತ್ ಗುರುಪುರ, ಪ್ರದೀಪ್ ಕೊರ್ಡಲ್, ದೇಜಪ್ಪ ಪೂಜಾರಿ, ಪುರಂದರ ದೇವಾಡಿಗ ಬೆರ್ಕೆ, ಯಶೋದ, ಪುಷ್ಪ ಕುಂದೋಡಿ, ಬಬಿತ, ಗಣೇಶ, ಹರ್ಷಿತ ಬಿ ಸಾಲ್ಯಾನ್, ಲಕ್ಷಿತ್ ಬಿ ಸಾಲ್ಯಾನ್ ಮತ್ತು ಊರ ಹತ್ತು ಸಮಸ್ತರುಗಳು ಪಾಲ್ಗೊಂಡಿದರು.