ಉಡುಪಿ : ಕಾಪು ಕಡಲ ತೀರದಲ್ಲಿ ಮೂಡಿ ಬಂದ ಮರಳಾಕೃತಿಯ ಗಣಪ
ನಾಡಿನೆಲ್ಲೆಡೆ ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗಿದೆ. ಈ ಹಬ್ಬದ ದಿನದಂದು ಉಡುಪಿಯ ಕಾಪು ಕಡಲ ತೀರದ ಮರಳಿನಲ್ಲಿ ಪ್ರಕೃತಿ ರೂಪದ ಮೂಲ ಪರಿಕಲ್ಪನೆಯಲ್ಲಿ ಹರಸಿನಯುಕ್ತ ಗಣಪನ ಕಲಾಕೃತಿಯೊಂದು ಮೂಡಿಬಂದಿದೆ.
ಹಲವು ಗಂಟೆಗಳ ಪರಿಶ್ರಮದಿಂದ ಸುಖಾಸೀನ ಭಂಗಿಯಲ್ಲಿ ಗಣಪನ ಈ ಮರಳು ಶಿಲ್ಪ ತಯಾರಾಗಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಗಜಾನನಂ ಎಂಬ ಥೀಂ ನೊಂದಿಗೆ ಈ ಮರಳು ಶಿಲ್ಪವನ್ನು ರಚಿಸಲಾಗಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕು ಕಲಾವಿದ ಹರೀಶ್ ಸಾಗ ತಂಡದವರು ಸೇರಿಕೊಂಡು ಬೀಚ್ ನಲ್ಲಿ ಈ ಮರಳು ಶಿಲ್ಪವನ್ನು ರಚಿಸಿದ್ದಾರೆ.