ಕರಿಯಂಗಳ: ನಿವೃತ್ತಿಗೊಳ್ಳುತ್ತಿರುವ ಪಂ. ಅ. ಅಧಿಕಾರಿ ಬಿ. ವಿ ಮಾಲಿನಿಗೆ ಬೀಳ್ಕೊಡುಗೆ ಸಮಾರಂಭ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ 3 ವರ್ಷ ಪಿಡಿಓ ಆಗಿ ಸೇವೆ ಸಲ್ಲಿಸಿ ನಿವೃತಿಗೊಳ್ಳುತ್ತಿರುವ ಪಂ. ಅ. ಅಧಿಕಾರಿ ಬಿ. ವಿ ಮಾಲಿನಿ ಅವರಿಗೆ ಕರಿಯಂಗಳ ಗ್ರಾಮ ಪಂಚಾಯತ್ ಹಾಗೂ ಊರವರಿಂದ ಬೀಳ್ಕೊಡುಗೆ ಸಮಾರಂಭ ಆ.31ರಂದು ಶನಿವಾರ ನಡೆಯಿತು.

ಬಿ. ವಿ ಮಾಲಿನಿ ಅವರ ಸೇವೆಯ ಬಗ್ಗೆ ವಿವರಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಚಂದ್ರಹಾಸ ಪಲ್ಲಿಪಾಡಿ, ವೀಣಾ ಆಚಾರ್ಯ, ಚಂದ್ರಾವತಿ ,ಉಪಾಧ್ಯಕ್ಷ ರಾಜು ಕೋಟ್ಯಾನ್, ಉಮೇಶ್ ಆಚಾರ್ಯ, ಶಾಲಾ ಶಿಕ್ಷಕರು, ಸುಬ್ರಾಯ ಕಾರಂತ,ಪ್ರಸಾದ್ ಗರೋಡಿ, ಅಂಗನವಾಡಿ ಶಿಕ್ಷಕಿ ರೇಣುಕಾ, ಸಿಸ್ಟರ್ ದೇವಕಿ, ಕು. ಭಾರತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಅವರುಗಳು ಮಾತಾನಾಡಿ ಕರಿಯಂಗಳ ಗ್ರಾಮ ಪಂಚಾಯತ್ ನಲ್ಲಿ 3 ವರ್ಷ ಪಿಡಿಓ ಆಗಿ ಸೇವೆ ಸಲ್ಲಿಸಿದ ಮಾಲಿನಿ ಅವರಿಗೆ ಸಂದ ಗೌರವ ಎಂದರು. ಅಲ್ಲದೇ ಅವರು 30 ವರ್ಷಗಳ ಸುದೀರ್ಘ ಸೇವೆಯ ಕಾರ್ಯವೈಖರಿಗೆ ಬೇರೆ ಬೇರೆ ಗ್ರಾಮ ಪಂಚಾಯತ್ಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ನೀಡಿದ್ದಾರೆ.

ಮಾಲಿನಿ ಅವರು ಕರಿಯಂಗಳ ಗ್ರಾಮ ಪಂಚಾಯತ್ನಲ್ಲಿ ಎಲ್ಲರನ್ನು ಮುಕ್ತವಾಗಿ ಮಾತನಾಡಿಸಿಕೊಂಡು ಎಲ್ಲರ ಜತೆಗೆ ಆತ್ಮೀಯತೆಯಿಂದ ಕೆಲಸ ಮಾಡಿದ ಅವರು ಯಾವುದೇ ಒಂದು ಕೆಲಸವನ್ನು ಕೂಡ ಮಾಡಬೇಕಾದರೆ ಅದರಲ್ಲಿ ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ ಎಂದು ಇಲ್ಲಿಯ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರಿಯಂಗಳ ಗ್ರಾಮ ಪಂಚಾಯತ್ನ ಅಧ್ಯಕ್ಷೆಯಾದ ರಾಧಾ ಲೋಕೇಶ್ ಅವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಉಪಾಧ್ಯಕ್ಷ ರಾಜು ಕೋಟ್ಯಾನ್, ಮಾಲಿನಿ ಅವರ ಸಹೋದರ ರಾಘವೇಂದ್ರ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕೂಡ ಮಾಲಿನಿ ಅವರಿಗೆ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ನೀರು ಸರಬರಾಜು ಮಾಡುವ ಭೋಜ ಪೂಜಾರಿಯವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.ಇನ್ನು ಈ ಕಾರ್ಯಕ್ರಮದಲ್ಲಿ ಅಂಗನವಾಡಿ, ಆಶಾಕಾರ್ಯಕರ್ತರು, ಶಾಲಾಶಿಕ್ಷಕರು, ಪೊಳಲಿ ದೇವಸ್ಥಾನ ಸಿಬ್ಬಂದಿಗಳು, ಕರಿಯಂಗಳ ಗ್ರಾ.ಪಂ. ಸಿಬ್ಬಂದಿಗಳು, ಕಳ್ಳಿಗೆ ಪಂಚಾಯತ್ ಸಿಬ್ಬಂದಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.ಚಂದ್ರಹಾಸ ಪಲ್ಲಿಪಾಡಿ ಸ್ವಾಗತಿಸಿ ನಿರೂಪಿಸಿದರು.
