ಪೊಳಲಿ ರಾಮಕೃಷ್ಣ ತಪೋವನದಲ್ಲಿ ಮೊಸರು ಕುಡಿಕೆ, ಶ್ರೀ ಕೃಷ್ಣ ಲೀಲೋತ್ಸವ
ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯ ಆಶ್ರಮದಲ್ಲಿ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಬೃಹತ್ ಮೆರವಣಿಗೆ ನಡೆಯಿತು. ಈ ವೇಳೆ ಸ್ವಾಮೀಜಿ ಸೇರಿದಂತೆ ಅನೇಕರು ಈ ಮೆರವಣಿಗೆಯಲ್ಲಿ ಭಾಗಿಸಿದ್ದರು, ನೃತ್ಯ, ಹಾಗೂ ಅನೇಕ ಸಾಂಸ್ಕೃತಿಕ, ಆರ್ಕಷಣೆಯ ವೇಷಗಳು ಇತ್ತು. ಆಶ್ರಮದಿಂದ ಭಾರೀ ಜನಸಂಖ್ಯೆಯ ಮೂಲಕ ಕೃಷ್ಣ ದೇವರ ಶೋಭಾಯಾತ್ರೆ ನಡೆಯಿತು, ರಾಮಕೃಷ್ಣ ತಪೋವನ ಪೊಳಲಿಯ ಆಶ್ರಮದಲ್ಲಿ ಎರಡು ದಿನಗಳಿಂದ ಪೂಜೆ ಹಾಗೂ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಸಡಗರ ಮನೆ ಮಾಡಿತ್ತು.
ಇದರ ಜತೆಗೆ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಲೀಲೋತ್ಸವ ಕೂಡ ನಡೆಯಿತು. ಹಾದಿ ಬೀದಿಗಳಲ್ಲಿ ಮೊಸರು ಕುಡಿಕೆಗಳನ್ನು ಕಟ್ಟಿ, ಯುವಕರು ಹಾಗೂ ಆಶ್ರಮದ ಮಕ್ಕಳು ಕುಡಿಕೆಗೆ ಹೊಡೆದು ಸಂಭ್ರಮಿಸಿದರು. ಆಶ್ರಮದ ಸ್ವಾಮೀಜಿಗಳು ಕೂಡ ಈ ಮೆರವಣಿಗೆಯಲ್ಲಿ ಭಕ್ತರಂತೆ ಸಾಗಿದರು.
ಮೆರವಣಿಗೆ ಆಶ್ರಮದಿಂದ ಹೊರಟು ಪೊಳಲಿ ದೇಗುಲವಾಗಿ, ಪೊಳಲಿ ದ್ವಾರದ ವರೆಗೆ ಸಾಗಿದ್ದು, ನೂರಾರು ಭಕ್ತರು ಈ ಶೋಭಾಯಾತ್ರೆಯಲ್ಲಿ ಭಾಗವಹಿಸಿದರು.