ಪೊಳಲಿ: ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜನ್ಮಾಷ್ಟಮಿ ಸಂಭ್ರಮ, ಕೃಷ್ಣ-ರಾಧಾ ವೇಷಧಾರಿ ಪುಟಾಣಿಗಳ ಜತೆಗೆ ಸ್ವಾಮೀಜಿ

ರಾಮಕೃಷ್ಣ ತಪೋವನ ಪೊಳಲಿಯ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಇಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ, ಮಹಾಮಂಗಳಾರತಿ.

ಮಕ್ಕಳ ಛದ್ಮವೇಷ ಸ್ಪರ್ಧೆ, ಬಹುಮಾನ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ವಿಶೇಷ ಭಜನ ಹಾಗೂ ಸಂಧ್ಯಾರತಿ ವಿವಿಧ ಕಾರ್ಯಕ್ರಮಗಳು ನಡೆಯಿತು.

ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಪುಟಾಣಿ ಮಕ್ಕಳು ರಾಧಾಕೃಷ್ಣರ ವೇಷದಲ್ಲಿ ಗಮನ ಸೆಳೆದರು. ಈ ವೇಳೆಯಲ್ಲಿ ಕೃಷ್ಣ ವೇಷ ತೊಟ್ಟ ಮಕ್ಕಳು ವಿವೇಕಚೈತನ್ಯಾನಂದ ಸ್ವಾಮೀಜಿಯೊಂದಿಗೆ ಫೋಟೋ ತೆಗೆಸಿಕೊಂಡರು. ನಾಳೆ ಆಗಸ್ಟ್ 27 ಮಂಗಳವಾರದಂದು ಶ್ರೀ ಕೃಷ್ಣನ ಮೆರವಣಿಗೆ ಮತ್ತು ಮೊಸರು ಕುಡಿಕೆ ಉತ್ಸವವು ಅದ್ದೂರಿಯಾಗಿ ನಡೆಯಲಿದೆ.