ಬಂಟ್ವಾಳ : ರಾಮಕೃಷ್ಣ ತಪೋವನ ಆಶ್ರಮದಲ್ಲಿ ಜನ್ಮಾಷ್ಟಮಿಯ ಪ್ರಯುಕ್ತ ಅಖಂಡ ಭಜನಾ ಕಾರ್ಯಕ್ರಮ

ರಾಮಕೃಷ್ಣ ತಪೋವನ ಪೊಳಲಿಯ ಆಶ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯಲಿರುವ ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಪರಹಿತಾನಂದಜೀ ಮಹಾರಾಜ್ ಭಾನುವಾರ ನೆರವೇರಿಸಿದರು.

ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಿತು.ಇಂದು ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ, ಮಹಾಮಂಗಳಾರತಿ, ಮಕ್ಕಳ ಛದ್ಮವೇಷ ಸ್ಪರ್ಧೆ, ಬಹುಮಾನ ವಿತರಣೆ, ವಿಶೇಷ ಭಜನ.

ಸಂಧ್ಯಾರಸಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಆಗಸ್ಟ್ 27 ಮಂಗಳವಾರದಂದು ಶ್ರೀ ಕೃಷ್ಣನ ಮೆರವಣಿಗೆ ಮತ್ತು ಮೊಸರು ಕುಡಿಕೆ ಉತ್ಸವವು ಅದ್ದೂರಿಯಾಗಿ ನಡೆಯಲಿದೆ.