Published On: Sun, Aug 25th, 2024

ಶಾಸಕ ಭರತ್ ಶೆಟ್ಟಿಗೆ ಬೆದರಿಕೆ, SDPI ಮುಖಂಡ ರಿಯಾಜ್ ಕಡಂಬು ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು

ಬಜ್ಪೆ: ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಅವರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಎಸ್.ಡಿ. ಪಿ.ಐನ ರಿಯಾಜ್ ಕಡoಬು ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಗುರುಪುರ ವತಿಯಿಂದ ದೂರು ಸಲ್ಲಿಸಲಾಯಿತು. “ನಾವು ಕಾನೂನು, ಸಂವಿಧಾನವನ್ನು ಗೌರವಿಸುತ್ತಿರುವುದಕ್ಕೆ ಭರತ್ ಶೆಟ್ಟಿ ಉಸಿರಾಡುತ್ತಿದ್ದಾರೆ” ಎಂದು ಸಂವಿಧಾನಿಕವಾಗಿ ಆಯ್ಕೆಯಾದ ಮಂಗಳೂರು ಉತ್ತರ ಶಾಸಕರ ಮೇಲೆ ತನ್ನ ಭಾಷಣದಲ್ಲಿ ಸಾರ್ವಜನಿಕವಾಗಿ ಬೆದರಿಕೆ ಹಾಕಿದ ಎಸ್ ಡಿಪಿಐ ನ ರಿಯಾಜ್ ಕಡoಬು ವಿರುದ್ದ ಬಜ್ಪೆ ಪೊಲೀಸ್ ಸ್ಟೇಷನ್ ನಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರ ಗುರುಪುರ ವತಿಯಿಂದ ದೂರು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಮಂಡಲ ಉಪಾಧ್ಯಕ್ಷರಾದ ಶೋಹನ್ ಅತಿಕಾರಿ, ಅಮೃತ್ ಲಾಲ್ ಡಿಸೋಜಾ, ಮಂಡಲ ಕಾರ್ಯದರ್ಶಿ ಸಚಿನ್ ಅಡಪ, ಮಹಿಳಾ ಮೋರ್ಚಾ ಅಧ್ಯಕ್ಷೆ ರೇಖಾ ರಾಜೇಶ್, ರೈತ ಮೋರ್ಚಾ ಅಧ್ಯಕ್ಷರು ಸುಕೇಶ್ ಮಾನೈ, ಗುರುಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಶೋಧನ್ ಅದ್ಯಪಾಡಿ,ರಾಜೇಶ್ ಸುವರ್ಣ, ಶ್ರೀಕರ್ ಶೆಟ್ಟಿ,ಕಾಶಿನಾಥ್ ಕಾಮತ್, ಪ್ರವೀಣ್ ಕುಮಾರ್ ಅದ್ಯಪಾಡಿ ,ವಿನಯ್ ರೈ, ನಿಶಾಂತ್ ಪೂಜಾರಿ, ಶ್ರವಣ್ ಶೆಟ್ಟಿ ,ಸುಧೀರ್ ಕಾಮತ್, ಪ್ರಶಾಂತ್ ಮುಂಡ, ವಿನಯ್ ಗುರುಪುರ, ಗುರುಪ್ರಸಾದ್ ಶೆಟ್ಟಿ ಪೆರಾರ, ವಿನೋದ್ ಗುರುಪುರ, ಉಮೇಶ್ ಮೂಲ್ಯ ಮತ್ತಿತರರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter