ಪೊಳಲಿ ಸೇತುವೆ: ಜಿಲ್ಲಾಧಿಕಾರಿಗಳೇ ಯಾವಾಗ ಬರುತ್ತೆ ನಿಮ್ಮ ಸೇತುವೆ ಪರೀಕ್ಷಾ ಯಂತ್ರ, ಪ್ರತಿಭಟನೆ ಎಚ್ಚರಿಕೆ ನೀಡಿದ ಸ್ಥಳೀಯರು
ಬಂಟ್ವಾಳ: ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆ ಬಿರುಕು ಬಿಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಂತೆ ಆ ಸೇತುವೆಯಲ್ಲಿ ಘನ ವಾಹನಗಳು ಸಂಚಾರಿದಂತೆ ನಿರ್ಬಂಧ ಹೇರಳಲಾಗಿತ್ತು, ಆದರೆ ಜಿಲ್ಲಾಧಿಕಾರಿಗಳು ಜನರ ಬಗ್ಗೆ ಯೋಚನೆ ಮಾಡದೆ ಅತುರದ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಏನಾದರೂ ಮಾಡಬೇಕಿತ್ತು ಎಂದು ಹೇಳಿದ್ರೆ, ಸ್ಥಳೀಯ ಅಧಿಕಾರಿಗಳು ಉಡಾಫೆಯ ಉತ್ತರವನ್ನು ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದರು. ತಕ್ಷಣ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುವುದಾಗಿ ಹೇಳಿ ಸ್ಥಳಕ್ಕೆ ಧಾವಿಸಿದರು. ಜತೆಗೆ ಅಲ್ಲಿನ ಜನರಿಗೆ ಭರವಸೆಯನ್ನು ನೀಡಿದರು. ಎರಡು ದಿನದ ಒಳಗೆ ಇಲ್ಲಿಗೆ ಸೇತುವೆ ಪರೀಕ್ಷಾ ಯಂತ್ರ ಬರುತ್ತದೆ. ಅವರು ನೀಡಿದ ವರದಿಯ ನಂತರ ಮುಂದಿನ ಕ್ರಮ ತೆಗೆದುಕೊಳ್ಳುವಾ ಎಂದು ಹೇಳಿದರು. ಈ ವೇಳೆ ಇಂಜಿನಿಯರ್ ಅಮರನಾಥ್ ಕೂಡ ಈ ಹೇಳಿಕೆಗೆ ಸಾಕ್ಷಿಯಾಗಿದರು. ಆದರೆ ಎರಡು ದಿನವಾದರೂ ಯಂತ್ರ ಬರಲೇ ಇಲ್ಲ. ಈ ನಂತರ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್ ಅವರು ಕೂಡ PW ಅವರಿಗೆ ಕರೆ ಮಾಡಿ ಏನಾಯಿತು? ಅಡ್ಡೂರು ಸೇತುವೆ ಪರಿಶೀಲನಾ ಯಂತ್ರ ಯಾವಾಗ ಬರುವುದು ಎಂದು ಕೇಳಿದಕ್ಕೆ ತಕ್ಷಣ ಯಂತ್ರ ಬರುತ್ತದೆ, ಅದು ದೆಹಲಿಯಿಂದ ಬರಬೇಕು. ಬಂದ ತಕ್ಷಣ ಕೆಲಸ ಶುರು ಮಾಡುವುದಾಗಿ ಹೇಳಿದರು. ಆದರೆ ಅಧಿಕಾರಿಗಳು ಈ ವಿಚಾರದಲ್ಲಿ ಆಸಕ್ತಿ ತೋರುವಂತೆ ಕಾಣುತ್ತಿಲ್ಲ. ಇದೀಗ ಅಡ್ಡೂರು, ಪೊಳಲಿ ಹಾಗೂ ಆಸುಪಾಸಿನ ನಾಗರಿಕರು ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಈ ಧೋರಣೆಗೆ ಇದೀಗ ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಸರಿಯಾದ ಬೇರೆ ಯಾವುದೇ ವ್ಯವಸ್ಥೆ ಇಲ್ಲದೆ ಇಲ್ಲಿ ಜನ ಪರದಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮತ್ತು ತಮ್ಮ ಅಧಿಕಾರಿಗಳಿಂದ ಇಲ್ಲಿನ ಜನರಿಗೆ ಇಷ್ಟು ತೊಂದರೆ ಆಗುತ್ತಿದೆ ಎಂಬುದು ಗೊತ್ತಾ? ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ವೃದ್ಧರು, ಭಕ್ತರಿಗೆ ಎಷ್ಟು ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಅಧಿಕಾರಿಗಳ ಈ ನಿರ್ಧಾರದಿಂದ ನಮ್ಮ ಜನರಿಗೆ ಎಷ್ಟು ಕಷ್ಟವಾಗಿದೆ ಎಂದರೆ ಅದನ್ನು ಹೇಳಲು ಸಾಧ್ಯವಿಲ್ಲ, ಬಂದ್ ಮಾಡುವುದನ್ನು ಮಾಡಿದ್ದಾರೆ, ಆದರೆ ಇದಕ್ಕೆ ಬದಲಿ ವ್ಯವಸ್ಧೆ ಬೇಕಲ್ವಾ, ಜಿಲ್ಲಾಧಿಕಾರಿಗಳು ಒಂದು ದಿನ ಸ್ಥಳಕ್ಕೆ ಬಂದು ನೋಡಿ ಹೋಗಿದ್ದಾರೆ. ಸೇತುವೆ ಪರೀಕ್ಷಾ ಯಂತ್ರ ಬುರತ್ತದೆ ಎಂದು ಹೇಳಿದರು. ಇನ್ನೂ ಬಂದಿಲ್ಲ. ಇದೀಗ ಏಕಾಏಕಿ ಚೆಕ್‌ಪೋಸ್ಟ್ ಮಾಡಿದ್ದಾರೆ, ನಾವು ಜಿಲ್ಲಾಧಿಕಾರಿಗಳಿಗೆ ಬಸ್ ಹಾಗೂ ಶಾಲಾ ಬಸ್ಸುಗಳಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದೇವೆ. ಮುಂದಿನ ಏಳು ದಿನದ ಒಳಗೆ ಈ ಬಗ್ಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಚಂದ್ರಹಾಸ ಪಳ್ಳಿಪಾಡಿ ಹೇಳಿದರು.
ಇನ್ನು ಈ ಬಗ್ಗೆ ಸುದ್ದಿ9 ಜತೆ ಮಾತನಾಡಿದ ಕಿಶೋರ್ ಪಳ್ಳಿಪಾಡಿ, ಜಿಲ್ಲಾಡಳಿತ ಸ್ಥಳೀಯ ಅಧಿಕಾರಿಗಳ ಹಾಗೂ ನಾಗರಿಕರ ಅಭಿಪ್ರಾಯ ಪಡೆಯದೆ ಏಕಾಏಕಿಯಾಗಿ ಸೇತುವೆ ಬಂದ್ ಮಾಡಿದ್ದಾರೆ. ಸೇತುವೆ ಶಿಥಿಲಗೊಂಡ ಬಗ್ಗೆ ಈವರೆಗೆ ಯಾರಿಗೂ ತಿಳಿಸಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ಯಾಕೆ ಇಷ್ಟೊಂದು ತಡ ಮಾಡುತ್ತಿದ್ದಾರೆ ಎಂದು ನಮಗೆ ಅರ್ಥವಾಗುತ್ತಿಲ್ಲ. ಸಾರ್ವಜನಿಕರಿಗೆ ಇಷ್ಟೊಂದು ತೊಂದರೆ ಆಗುತ್ತಿದೆ ಎಂಬ ಬಗ್ಗೆ ಯಾಕೆ ಅವರು ಯೋಚನೆ ಮಾಡುತ್ತಿಲ್ಲ. ಸೇತುವೆ ಪರೀಕ್ಷಾ ಯಂತ್ರ ಇವತ್ತು ಬರುತ್ತದೆ ನಾಳೆ ಬರುತ್ತದೆ ಎಂದು ಇಂಜಿನಿಯರ್ ಹೇಳುತ್ತಾರೆ. ಅದರೇ ಇನ್ನು ಬಂದಿಲ್ಲ, ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ನಾವು ಪ್ರತಿಭಟನೆ ಮೂಲಕ ಉತ್ತರ ನೀಡಬೇಕಾಗುತ್ತದೆ ಎಂದು ವೆಂಕಟೇಶ್ ನಾವಡ ಪೊಳಲಿ ಎಚ್ಚರಿಕೆ ನೀಡಿದ್ದಾರೆ.
ಸೇತುವೆ ಶಿಥಿಲ ವ್ಯವಸ್ಥೆಯಲ್ಲಿ ಇದ್ದೀಯಾ? ಒಂದು ವೇಳೆ ಇದ್ದರೆ ಯಾಕೆ ಇಷ್ಟು ದಿನವಾದರೂ ಅದನ್ನು ದುರಸ್ಥಿ ಮಾಡುವ ಯೋಚನೆ ಮಾಡುತ್ತಿಲ್ಲ. ಜಿಲ್ಲಾಡಳಿತ ಸಾರ್ವಜನಿಕರಿಗೆ ಒಂದು ಮಾಹಿತಿಯನ್ನು ನೀಡದೆ ಏಕಾಏಕಿ ಬಂದ್ ಮಾಡಿರುವುದು ಎಷ್ಟು ಸರಿ? ಇದಕ್ಕೆ ಜಿಲ್ಲಾಧಿಕಾರಿಗಳು ಉತ್ತರ ನೀಡಬೇಕು, ಒಂದು ವೇಳೆ ಕ್ರಮ ತೆಗೆದುಕೊಳ್ಳದಿದ್ದರೆ ಪಕ್ಷ ಭೇದ ಮರೆತು ಪ್ರತಿಭಟನೆ ಮಾಡಲು ಸಿದ್ಧ ಎಂದು ಚಂದ್ರಶೇಖರ ಶೆಟ್ಟಿ ಹೇಳಿದರು.
ಈ ವೇಳೆ ವೆಂಕಟೇಶ್ ನಾವಡ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ,ಚಂದ್ರಶೇಖರ ಶೆಟ್ಟಿ ಬಡಕಬೈಲ್, ಯಶಂವತ್ ಕೊಟ್ಯಾನ್ ಪೊಳಲಿ, ಗ್ರಾಮಪಂಚಾಯತ್ ಉಪಧ್ಯಾಕ್ಷರಾದ ರಾಜು ಕೊಟ್ಯಾನ್, ಮಾಜಿ ಗ್ರಾಮಪಂಚಾಯತ್ ಸದಸ್ಯರಾದ ಕಿಶೋರ್ ಪಲ್ಲಿಪಾಡಿ, ಲೋಕೇಶ್ ಕರಿಯಂಗಳ, ಬಸ್ ಮಾಲಾಕರುಹಾಗೂ ರಿಕ್ಷಾ ಚಾಲಕರಾದ ನಿತೀಶ್, ವಿನೋದ್, ಸತೀಶ್, ದಾವೋದರ್, ಕರುಣಾಕರ, ಭಜರಂಗದಳದ ಅಧ್ಯಕ್ಷ, ಹಾಗೂ ಸಂಚಾಲಕರಾದ ವಿನೋದ್, ಲೋಕೇಶ್, ಪ್ರೇಮನಾಥ್ ಕರಿಯಂಗಳ, ಸದೀಪ್ ಕಮ್ಮಾಜೆ, ರೋಶನ್ ಗರೋಡಿ., ವಿಜಯ ಪಲ್ಲಿಪಾಡಿ ,ಪ್ರಸಾದ್ ಶೆಟ್ಟಿ ಪೊಳಲಿ, ಸುನೀಲ್ ಪೊಳಲಿ ಮುಂತಾದವರು ಉಪಸ್ಥಿತರಿದ್ದರು.