ಮಂಗಳೂರು: ಪ್ರತಿಭಟನೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತ ಪುಂಡಾಟ, ಬಸ್ಸಿಗೆ ಕಲ್ಲು ತೂರಾಟ

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯಪಾಲರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭನೆ ನಡೆಸುತ್ತಿದ್ದು, ಇದೀಗ ಈ ಪ್ರತಿಭಟನೆಯೂ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಪೊಲೀಸರ ಎದುರಲ್ಲೇ ಕಾಂಗ್ರೆಸ್ ಕಾರ್ಯಕರ್ತನು ಬಸ್ಸಿಗೆ ಕಲ್ಲು ತೂರಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ತೋರಿದ್ದಾನೆ. ಮಂಗಳೂರು ಪಾಲಿಕೆ ಮುಂಭಾಗ ಬಸ್ ತಡೆದು, ಪೊಲೀಸರ ಎದುರಲ್ಲೇ ಬಸ್ಸಿನ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದಾನೆ. ಆ ಬಳಿಕ ಬಸ್ಸಿನ ಮುಂಭಾಗ ಕಾಲಿನಿಂದ ಒದ್ದು ಗೂಂಡಾಗಿರಿಯಂತೆ ವರ್ತಿಸಿದ್ದಾನೆ.
ಆತನನ್ನು ವಶಕ್ಕೆ ಪಡೆದು ಪೊಲೀಸ್ ವಾಹನದ ಬಳಿ ಕರೆದೊಯ್ದುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ. ಕಾರ್ಯಕರ್ತನ ಗೂಂಡಾಗಿರಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.