
ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುವುದೇ ಒಂದು ಪುಣ್ಯ, ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಯ್ಯಪ್ಪನ ಕೃಪೆಗೆ ಹಾಗೂ ದರ್ಶನ ಸಿಗಬೇಕಾದರೆ, ಕಠಿಣ ಅನುಷ್ಠಾನ ಅಗತ್ಯ. ಇದಕ್ಕಾಗಿ ಅಯ್ಯಪ್ಪ ಭಕ್ತರು, ಸ್ವಾಮಿಯ ನೀತಿ ನಿಯಮಗಳನ್ನು ಶ್ರದ್ಧ-ಭಕ್ತಿಯಿಂದ ಆಚರಣೆ ಮಾಡುತ್ತಾರೆ. ಆಗಸ್ಟ್ ತಿಂಗಳ ಶ್ರವಣ ಮಾಸದಲ್ಲಿ ಬರುವ ವಿಶೇಷ ಸಂಕ್ರಮಣದಂದು ಪೊಳಲಿ ಅಯ್ಯಪ್ಪ ಭಕ್ತ ವೃಂದದಿಂದ ಪ್ರತಿ ವರ್ಷದಂತೆ ಈ ವರ್ಷವು ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಯಾತ್ರೆ ಕೈಗೊಳ್ಳಲಾಗಿತ್ತು.

ಅಯ್ಯಪ್ಪನ ಸೇವೆಗಾಗಿ ಪೊಳಲಿಯ ಅಯ್ಯಪ್ಪ ಮಾಲಾಧಾರಿಗಳು ಸ್ವಾಮಿಯ ದರ್ಶನ ಪಡೆದು, ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಪೊಳಲಿಯ ಅಯ್ಯಪ್ಪ ಮಾಲಾಧಾರಿಗಳು ಶಬರಿ ಅಯ್ಯಪ್ಪನ ಸನ್ನಿಧಾನದಲ್ಲಿ ರಕ್ಷಾಬಂಧನ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇದು ತುಂಬಾ ವಿಶೇಷವಾಗಿತ್ತು.

ಪೊಳಲಿಯ ಅಯ್ಯಪ್ಪ ಮಾಲಾಧಾರಿಗಳು ಪ್ರತಿ ವರ್ಷ ಶಬರಿಮಲೆಗೆ ತೆರಳಿದಾಗ, ಇಂತಹ ವಿಶೇಷ ಕೆಲಸಕ್ಕೆ ಸಾಕ್ಷಿಯಾಗುತ್ತಾರೆ. ಈ ಬಾರಿಯೂ ಸ್ವಾಮಿ ಸಮ್ಮುಖದಲ್ಲಿ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಿದರು. ಗುರುಸ್ವಾಮಿ ಹರೀಶ್ ಶೆಟ್ಟಿ ನೇತೃತ್ವದಲ್ಲಿ ಈ ಆಚರಣೆ ಮಾಡಲಾಗಿತ್ತು. ಇನ್ನು ಈ ವೇಳೆ ಮತ್ತೊಬ್ಬ ಗುರುಸ್ವಾಮಿ ಹರೀಶ್ ತೋಡಬರಿ ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ರಕ್ಷೆ ಕಟ್ಟುವ ಮೂಲಕ ಅಯ್ಯಪ್ಪ ಕ್ಷೇತ್ರದಲ್ಲಿ ವಿಭಿನ್ನವಾಗಿ ಆಚರಿಸಿದರು.
ಇನ್ನು ಪೊಳಲಿ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ಒಟ್ಟು 34 ಜನ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಂಡಿದರು. ದೇವರ ದರ್ಶನ ಮಾಡಿ ನಂತರ ಅಯ್ಯಪ್ಪ ಸ್ವಾಮಿ ದೇಗುಲದ ಆವರಣದಲ್ಲಿ ರಕ್ಷಾಬಂಧನ ಆಚರಣೆ ಮಾಡಲಾಗಿದೆ.
