ಮುದ್ದು ಮುದ್ದು ಮಕ್ಕಳೊಂದಿಗೆ ಪ್ರಧಾನಿ ಮೋದಿ ರಕ್ಷಾ ಬಂಧನ ಆಚರಣೆ

ದೇಶಾದ್ಯಂತ ಇಂದು ನೂಲ ಹುಣ್ಣಿಮೆಯ ಸಂಭ್ರಮ. ದೇಶದೆಲ್ಲೆಡೆ ಸಹೋದರತೆ ಮತ್ತು ಪ್ರೀತಿಯ ಸಂಕೇತವಾದ ರಾಖಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈ ಬಾರಿ ರಕ್ಷಾ ಬಂಧನದಂದು ದೆಹಲಿಯ ವಿವಿಧ ಶಾಲೆಗಳ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿ ಕಟ್ಟಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡಿರುವ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಶಾಲಾ ಮಕ್ಕಳು ನಗುಮೊಗದಿಂದ ಸ್ವಾಗತಿಸುತ್ತಿದ್ದಾರೆ. ಅವರು ಕುರ್ಚಿಯ ಮೇಲೆ ಕುಳಿತಿದ್ದು, ಶಾಲಾ ವಿದ್ಯಾರ್ಥಿನಿಯರು ರಾಖಿ ಕಟ್ಟಲು ಸರದಿಯಂತೆ ನಿಂತು ರಾಖಿ ಕಟ್ಟಿದ್ದಾರೆ. ಇದೇ ವೇಳೆ ಮಕ್ಕಳೊಂದಿಗೆ ನಡೆಸಿದ್ದು, ಕೊನೆಯಲ್ಲಿ, ಪ್ರಧಾನಿ ಮೋದಿಯವರು ಶಾಲಾ ವಿದ್ಯಾರ್ಥಿನಿಯರು ಮತ್ತು ಶಿಕ್ಷಕರೊಂದಿಗೆ ಗ್ರೂಪ್ ಫೋಟೋಗೆ ಪೋಸ್ ನೀಡಿದ್ದಾರೆ.

ರಕ್ಷಾ ಬಂಧನದ ದಿನದಂದು ಪ್ರಧಾನಿ ಮೋದಿ ಮೈಕ್ರೋ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ ನಲ್ಲಿ ಶುಭಾಶಯಗಳನ್ನು ಕೋರಿದ್ದಾರೆ. “ಸಹೋದರ ಸಹೋದರಿಯರ ನಡುವಿನ ಅಪಾರ ಪ್ರೀತಿಯನ್ನು ಸಂಕೇತಿಸುವ ಹಬ್ಬವಾದ ರಕ್ಷಾಬಂಧನದ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಈ ಪವಿತ್ರ ಹಬ್ಬವು ನಿಮ್ಮೆಲ್ಲರ ಸಂಬಂಧಗಳಲ್ಲಿ ಹೊಸ ಮಾಧುರ್ಯವನ್ನು ತರಲಿ ಮತ್ತು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ” ಎಂದು ಬರೆದುಕೊಂಡಿದ್ದಾರೆ.