ಮಂಗಳೂರು-ಬೆಂಗಳೂರು ರೈಲು ಹಳಿ ಮೇಲಿನ ಮಣ್ಣು ತೆರವು ಕಾರ್ಯಕ್ಕೆ ವೇಗ

ಮಂಗಳೂರು: ಸಕಲೇಶಪುರ-ಬಾಳ್ಳುಪೇಟೆ ನಡುವೆ ಒಂದು ವಾರದ ಹಿಂದೆ ಗುಡ್ಡ ಕುಸಿತದಿಂದ ರೈಲುವೇ ಮಾರ್ಗ ಸಂಪೂರ್ಣ ಮುಚ್ಚಿ ಹೋಗಿತ್ತು. ನಂತರ ಮತ್ತೆ ಶುಕ್ರವಾರದಂದು (ಆ.16) ಮಣ್ಣು ಕುಸಿದೆ. ಇದೀಗ ಮಂಗಳೂರು-ಬೆಂಗಳೂರು ರೈಲು ಹಳಿ ಮೇಲೆ ಬಿದ್ದಿರುವ ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿದೆ.
ಶುಕ್ರವಾರ ಗುಡ್ಡ ಕುಸಿತದಿಂದ ರೈಲು ಸಂಚಾರ ಸ್ಥಗಿತವಾಗಿತ್ತು. ಮೂರು ದಿನಗಳಿಂದ ಮಣ್ಣು ತೆರವು ಕಾರ್ಯಚರಣೆ ನಡೆಯುತ್ತಿದ್ದು. ನಾಲ್ಕೈದು ಜೆಸಿಬಿಗಳು ಈ ಕಾರ್ಯದಲ್ಲಿ ತೋಡಗಿದೆ. ಹಾಗೂ ಮುಂದೆ ಭೂಕುಸಿತ ಆಗದಂತೆ ಬೆಟ್ಟದ ತುದಿಯಿಂದಲೂ ಮಣ್ಣು ತೆಗೆಯಲಾಗುತ್ತಿದೆ.
ಇದನ್ನೂ ಓದಿ: ಗ್ರಾಮಕ್ಕೆ ಇಂತಹ ನಾಯಕತ್ವ ಬೇಕು, ಬಡಗಬೆಳ್ಳೂರು ಜನರ ಸಂಕಷ್ಟಕ್ಕೆ ಆಸರೆಯಾದ ಗ್ರಾಮ ಪಂಚಾಯತ್ ಅಧ್ಯಕ್ಷೆ
ಈ ಕಾರ್ಯದ ನಡೆಯು ಅದೇ ಗುಡ್ಡದಿಂದ ಮಣ್ಣು ಬೀಳುತ್ತಿದೆ. ಮಣ್ಣು ಮತ್ತು ಲೋಳೆಯ ಮಿಶ್ರಣದಿಂದ ರೈಲ್ವೆ ಹಳಿಯನ್ನು ತುಂಬುತ್ತದೆ. ಇದರ ಜತೆಗೆ ಮಣ್ಣು ಕುಸಿಯದಂತೆ ತಡೆಗೋಡೆಗಳ ನಿರ್ಮಾಣ ಕೂಡ ಮಾಡಲಾಗುತ್ತಿದೆ. ಜತೆಗೆ ರೈಲು ಹಳಿಗಳನ್ನು ಕೂಡ ದುರಸ್ಥಿ ಮಾಡಲಾಗುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.