ಗ್ರಾಮಕ್ಕೆ ಇಂತಹ ನಾಯಕತ್ವ ಬೇಕು, ಬಡಗಬೆಳ್ಳೂರು ಜನರ ಸಂಕಷ್ಟಕ್ಕೆ ಆಸರೆಯಾದ ಗ್ರಾಮ ಪಂಚಾಯತ್ ಅಧ್ಯಕ್ಷೆ

ಗ್ರಾಮದ ಅಭಿವೃದ್ಧಿಗೆ ಯಾವ ಕಾಲಕ್ಕೂ ದುಡಿಯುವ ನಾಯಕತ್ವ ಒಂದು ಗ್ರಾಮಕ್ಕೆ ಬೇಕು ಆಗ ಮಾತ್ರ ಆ ಗ್ರಾಮದ ಅಭಿವೃದ್ಧಿಯಾಗಲು ಸಾಧ್ಯ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಗ್ರಾಮದ ನಾಗರಿಕ ಸಂಕಷ್ಟಕ್ಕೆ ಆಸರೆಯಾಗಿದ್ದಾರೆ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೂಪಶ್ರೀ.
ಹೌದು, ಅತಿಕಾರಹಿತ್ಲು ಕಲ್ಲುರ್ಟಿ ದೈವಸ್ಥಾನ ಹಾಗೂ ಪರಿಸರದ ಮನೆಗಳಿಗೆ ಸಂಪರ್ಕದಲ್ಲಿರುವ ರಸ್ತೆ ಸತತವಾಗಿ ಸುರಿದ ಮಳೆಯಿಂದ ತೀರಾ ಹದಗೆಟ್ಟಿತು. ಇದನ್ನು ಸರಿಪಡಿಸುವಂತೆ ಸಾರ್ವಜನಿಕರ ಗ್ರಾಮ ಪಂಚಾಯತ್ ಗೆ ಮನವಿಯನ್ನು ಮಾಡಲಾಗಿತ್ತು. ಇದಕ್ಕೆ ತಕ್ಷಣ ಸಕಾರಾತ್ಮಕವಾಗಿ ಸ್ಪಂದಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ರೂಪಶ್ರೀ ಅತೀ ಶೀಘ್ರದಲ್ಲಿ ರಸ್ತೆ ಸರಿಪಡಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಸಿಕೊಟ್ಟಿದ್ದಾರೆ.
ಇದಕ್ಕೆ ಅಲ್ಲಿನ ಜನ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ “ಶ್ರೀಮತಿ ರೂಪಶ್ರೀ’ ಇವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.