ಕುಪ್ಪೆಪದವು ಹದಗೆಟ್ಟ ಅರಮನೆ ಬಂಡಿ ರಸ್ತೆ , ಕಾಪಿಕಾಡು ಅಯ್ಯಪ್ಪ ಭಕ್ತ ವೃದದವರಿಂದ ಗುಂಡಿಗಳಿಗೆ ಕೆಂಪು ಕಲ್ಲುಹಾಕಿ ಮುಚ್ಚುವ ಕಾರ್ಯ ಶ್ಲಾಘನೀಯ
ಕೈಕಂಬ: ಎಡಪದವು ಪಂಚಾಯತ್ ನ ಪೂಪಾಡಿಕಲ್ಲು ಮತ್ತು ಬಾರ್ದಿಲ ದೇವಸ್ಥಾನ ಹಾಗೂ ಮಸೀದಿಗೆ ಕುಪ್ಪೆಪದವಿನಿಂದ ಕಾಪಿಕಾಡು ಮೂಲಕ ಸಂಪರ್ಕ ಕಲ್ಪಿಸುವ ಇಲ್ಲಿನ ಅರಮನೆ ಬಂಡಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ರಸ್ತೆಯಲ್ಲಿ ಉಂಟಾಗಿರುವ ಬ್ರಹತ್ ಹೊಂಡಗಳು ವಾಹನ ಸವಾರರ ಸೊಂಟ ಮುರಿಯಲು ಕಾಯುತ್ತಿವೆ.
ಕಳೆದ ಕೆಲವು ವರ್ಷಗಳ ಹಿಂದೆ ಈ ರಸ್ತೆಯ ಗುಂಡಿ ಮುಚ್ಚಿ ತೇಪೆ ಹಾಕುವ ಕಾಮಗಾರಿ ನಡೆದಿತ್ತು. ಆದರೆ ಕಾಮಗಾರಿ ಮುಗಿದಷ್ಟೇ ವೇಗದಲ್ಲಿ ಮುಚ್ಚಿದ ಗುಂಡಿಗಳಿAದ ಡಾಮಾರು ಕಿತ್ತು ಹೋಗಿ ವಾಹನ ಸಂಚಾರ ದುಸ್ತರವಾಗಿತ್ತು. ಇದೀಗ ಈ ಬಾರಿ ಸುರಿದ ಭಾರೀ ಮಳೆಗೆ ರಸ್ತೆಯಲ್ಲಿ ಬ್ರಹತ್ ಹೊಂಡಗಳು ಸೃಷ್ಠಿಯಾಗಿದ್ದು, ವಾಹನ ಸವಾರರ ಸೊಂಟ ಮುರಿಯಲು ಕಾತರದಿಂದ ಕಾಯುತ್ತಿವೆ. ಜಿಲ್ಲಾಪಂಚಾಯತ್ ಗೆ ಸೇರಿದ ಈ ರಸ್ತೆಯಲ್ಲಿ ದಿನ ನಿತ್ಯ ನೂರಾರು ವಾಹನಗಳು ಸಂಚಾರ ಮಾಡುತ್ತಿದ್ದು ಎಲ್ಲಿ ಯಾವಾಗ ಗುಂಡಿಗೆ ಬಿದ್ದು ಅಪಘಾತವಾಗುತ್ತದೆ ಎಂಬ ಭಯದಿಂದಲೇ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮದ್ಯೆ ರಸ್ತೆ ಬದಿಯಲ್ಲಿ ಜೆಜೆಎಂ ಪೈಪ್ ಲೈನ್ ಅಳವಡಿಕೆ ನಡೆದಿದ್ದು, ಮಳೆಗೆ ರಸ್ತೆ ಬದಿಯ ಮಣ್ಣು ಕೊಚ್ಚಿ ಹೋಗಿ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ.
ರಸ್ತೆ ಹೊಂಡಗಳ ಬಗ್ಗೆ ವ್ಯಂಗ್ಯದ ಹಾಡೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ ಆದರೂ ಇಲಾಖಾ ಅಧಿಕಾರಿಗಳ ಕಿವಿಗೆ ಕೇಳಿಸುತ್ತಿಲ್ಲ ಸವಾರರ ಗೋಳು.ಈ ಮದ್ಯೆ ಸ್ವಾತಂತ್ರ‍್ಯ ದಿನಾಚರಣೆಯಂದು ಇಲ್ಲಿನ ಕಾಪಿಕಾಡು ಅಯ್ಯಪ್ಪ ಭಕ್ತ ವೃoದದ ಸದಸ್ಯರು ದೊಡ್ಡ ಗುಂಡಿಗಳಿಗೆ ಕೆಂಪು ಕಲ್ಲು ತುಂಬಿಸಿ ಗುಂಡಿ ಮುಚ್ಚುವ ಮೂಲಕ ಶ್ಲಾಘನೀಯ ಕೆಲಸ ಮಾಡಿದ್ದಾರೆ.
ಆದರೆ ವಾಹನಗಳ ಸಂಚಾರದಿAದ ಮತ್ತೆ ಗುಂಡಿಗಳು ಬಾಯ್ದೆರೆಯುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ರಸ್ತೆಗೆ ಸಂಪೂರ್ಣ ಡಾಮಾರೀಕರಣ ಮಾಡಬೇಕು ಇಲ್ಲದಿದ್ದಲ್ಲಿ ಕನಿಷ್ಠಪಕ್ಷ ಗುಂಡಿಗಳಿಗೆ ಡಾಮಾರು ಹಾಕಿ ಮುಚ್ಚಿ ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ಸಾರ್ವಜನಿಕರ ಅಗ್ರಹವಾಗಿದೆ.
“ಈ ರಸ್ತೆಯ ದುರಸ್ಥಿಗೆ ಅನುದಾನ ಮಂಜೂರು ಮಾಡುವಂತೆ ಶಾಸಕ ಭರತ್ ಶೆಟ್ಟಿಯವರಿಗೆ ಕಳೆದ ವಿಧಾನ ಸಭಾ ಚುನಾವಣೆಗೂ ಮುನ್ನ ಮನವಿ ಸಲ್ಲಿಸಲಾಗಿತ್ತು. ಆದರೆ ಚುನಾವಣೆ ಬಳಿಕ ಸರಕಾರ ಬದಲಾದ ಕಾರಣ ಅನುದಾನ ಬಂದಿಲ್ಲ. ಇದೀಗ ಮತ್ತೆ ಶಾಸಕರಲ್ಲಿ ಮನವಿ ಮಾಡಲಾಗಿದ್ದು, ಮಳೆಹಾನಿ ಯೋಯಲ್ಲಿ ಶೀಘ್ರ ಅನುದಾನ ಒದಗಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ:
-ಗಣೇಶ್ ಪಾಕಜೆ. ಕಾರ್ಯದರ್ಶಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ.
.