ಮಂಗಳೂರು : ಪೊಳಲಿ ಸೇತುವೆಯಲ್ಲಿ ಸಂಚಾರ ಬಂದ್, ಸಾರ್ವಜನಿಕರಲ್ಲಿ ಮೂಡಿದ ಗೊಂದಲ

ಅಡ್ಡೂರು ಪೊಳಲಿ ಪಲ್ಗುನಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯಲ್ಲಿ ಬಿರುಕು ಬಿಟ್ಟಿರುವ ಕಾರಣ ಘನ ವಾಹನಗಳ ಸಂಚಾರ ವನ್ನು ನಿಷೇದಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ ಈ ಬಗ್ಗೆ ಮೊದಲೇ ಮಾಹಿತಿ ಸಿಗದ ಹಿನ್ನಲೆಯಲ್ಲಿ ಸಾರ್ವಜನಿಕರು ಗೊಂದಲದಲ್ಲಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೇ ಪೊಳಲಿ ಪಲ್ಗುನಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆಯನ್ನು ಬಂದ್ ಮಾಡಲಾಗಿದೆ. ಈ ಸೇತುವೆಯನ್ನೇ ಅವಲಂಬಿಸಿಕೊಂಡವರಿಗೆ ಪರ್ಯಾಯ ಮಾರ್ಗವಾಗಿ ಮಲ್ಲೂರು ರಸ್ತೆಯ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ. ಆದರೆ, ಅಡ್ಡೂರು ಸೇತುವೆಯ ಕಾಮಗಾರಿಯ ಕುರಿತಾಗಲಿ ಹಾಗೂ ಎಷ್ಟು ದಿನಗಳ ಕಾಲ ಸಂಚಾರ ಬಂದ್ ಇರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯು ಇರದ ಕಾರಣ ಇಲ್ಲಿನ ಸುತ್ತಮುತ್ತಲಿನ ಜನರು ಗೊಂದಲಕ್ಕೆ ಸಿಲುಕಿದ್ದಾರೆ.
ದಿನನಿತ್ಯ ಕೆಲಸ ಕಾರ್ಯಗಳಿಗೆ ತೆರಳಲು ಈ ಮಾರ್ಗವನ್ನೇ ಅವಲಂಬಿಸಿಕೊಂಡವರೇ ಹೆಚ್ಚಾಗಿದ್ದು ಈ ಬಗ್ಗೆ ಸರಿಯಾದ ಮಾಹಿತಿ ನೀಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. 1970 ರಲ್ಲಿ ನಿರ್ಮಾಣಗೊಂಡಿದ್ದು, ಬಿಸಿರೋಡ್ ನಿಂದ ಪೊಳಲಿ ಮಾರ್ಗವಾಗಿ ಮಂಗಳೂರು ಹಾಗೂ ಬಜ್ಪೆ ಮೂಡಬಿದ್ರಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಪೊಳಲಿ ಸೇತುವೆ ಇದಾಗಿದೆಇದಾಗಿದೆ.
ಇದನ್ನೂ ಓದಿ: ಪೊಳಲಿ ಶ್ರೀ ವರಮಹಾಲಕ್ಷ್ಮೀ ವೃತದ ಪ್ರಯುಕ್ತ ಮಹಿಳೆಯರಿಗೆ ಅರಿಸಿನ-ಕುಂಕುಮ ಮತ್ತು ಬಳೆ
ಸದ್ಯಕ್ಕೆ ಈ ಸೇತುವೆಯು ಅಪಾಯದ ಸ್ಥಿತಿಯಲ್ಲಿದ್ದು, ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸಂಚಾರವನ್ನು ಬಂದ್ ಮಾಡಲಾಗಿದೆ. ಸೇತುವೆಯನ್ನು ರಾಜ್ಯ ಹೆದ್ದಾರಿ ಪ್ರಾಧಿಕಾರವು ಪರಿಶೀಲನೆ ಮಾಡಲಾಗಿದ್ದು, ಸೇತುವೆಯನ್ನು ದುರಸ್ತಿಪಡಿಸಬೇಕೆಂದು ವರದಿಯಲ್ಲಿ ತಿಳಿಸಿದೆ.