National Film Awards 2024 : ಇದು ತುಳುನಾಡಿಗೆ ಗೌರವ, ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ

ಭಾರತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯಾದ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇಂದು (ಆಗಸ್ಟ್ 16) ರಂದು ಘೋಷಣೆಯಾಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನವೇ ಸ್ಯಾಂಡಲ್‌ವುಡ್ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಹೌದು, ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಕಾಂತಾರ ಸಿನಿಮಾಗೆ ಅತ್ಯುತ್ತಮ ಚಿತ್ರ ಪ್ರಶಸ್ತಿಯೂ ಸಿಕ್ಕಿದೆ. ಅದಲ್ಲದೇ ಯಶ್ ಅಭಿನಯದ ಕೆಜಿಎಪ್ 2 ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ.
ಅತ್ಯುತ್ತಮ ನಟರ ಪೈಪೋಟಿಯಲ್ಲಿ ರಿಷಬ್ ಶೆಟ್ಟಿ ಹಾಗೂ ಮಲೆಯಾಳಂ ನಟ ಮಮ್ಮುಟ್ಟಿ ನಡುವೆ ಭಾರಿ ಸ್ಪರ್ಧೆಯೊಂದು ಏರ್ಪಟ್ಟಿತ್ತು. 2022 ಜನವರಿ 1ರಿಂದ 2022 ಡಿಸೆಂಬರ್ 31 ರ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಪ್ರಶಸ್ತಿಯನ್ನು ಘೋಷಿಸಲಾಗಿದೆ.