ಉಡುಪಿ: ಆನೆಗುಡ್ಡೆ ದೇವಳದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ
ಇಂದು ರಾಜ್ಯದ ಎಲ್ಲಡೆ ವರಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದ ವರಮಹಾಲಕ್ಷ್ಮೀಗೆ ವಿಶೇಷ ಆದ್ಯತೆ ಇದೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಆನೆಗುಡ್ಡೆ ದೇವಳದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆದಿದೆ.
ಕುಂದಾಪುರ ತಾಲೂಕು ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ಇಂದು ವಿಶೇಷ ಪೂಜೆಯನ್ನು ಸಲಿಸಲಾಗಿತ್ತು. ಅನೇಕ ಭಕ್ತ ಸಮ್ಮುಖದಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಆಚರಣೆ ಮಾಡಲಾಗಿತ್ತು. ಇನ್ನು ದೇವಾಲಯದಲ್ಲಿ ಭಾರೀ ಭಕ್ತ ಸಾಗರ ಸೇರಿದೆ.
ಇದನ್ನೂ ಓದಿ: ಪೊಳಲಿ ಶ್ರೀ ವರಮಹಾಲಕ್ಷ್ಮೀ ವೃತದ ಪ್ರಯುಕ್ತ ಮಹಿಳೆಯರಿಗೆ ಅರಿಸಿನ-ಕುಂಕುಮ ಮತ್ತು ಬಳೆ
ರಾಜ್ಯ ಮತ್ತು ಹೊರ ರಾಜ್ಯದಿಂದ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಇನ್ನು ಏಕಾದಶಿ ಇರುವ ಹಿನ್ನೆಲೆಯಲ್ಲಿ ದೇಗುಲದಲ್ಲಿ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಅದರೂ ಭಕ್ತ ದೇವಾಲಯಕ್ಕೆ ಹೆಚ್ಚಾಗಿ ಬರುತ್ತಿದ್ದಾರೆ.