ಕರಿಯಂಗಳ ಗ್ರಾಮ ಪಂಚಾಯತ್ ವತಿಯಿಂದ ೭೮ ನೇ ಸ್ವಾತಂತ್ರೋತ್ಸವ ಘನತ್ಯಾಜ್ಯ ವಾಹನ ಲೋಕಾರ್ಪಣೆ.
ಕೈಕಂಬ: ಕರಿಯಂಗಳ ಗ್ರಾಮ ಪಂಚಾಯತ್ ವತಿಯಿಂದ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ಬಹಳ ವಿಜೃಂಭನೆಯಿಂದ ಅಚರಿಸಲಾಯಿತು. ಕರಿಯಂಗಳಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ದ್ವಜಾರೊಹಣಗೈದರು.
ಸ್ವಾತಂತ್ರೋತ್ಸವದ ಶುಭ ಸಂದರ್ಭದಲ್ಲಿ ಘನತ್ಯಾಜ್ಯ ವಾಹನದ ಲೋಕಾರ್ಪಣೆಗೊಂಡಿತು. ಕರಿಯಂಗಳ ಗ್ರಾಮ ಪಂಚಾಯತ್ ನಿಧಿ ಹಾಗೂ 15 ನೇ ಹಣಕಾಸು ಯೋಜನೆ ನಿಧಿಯಿಂದ ಸುಮಾರು ೭.೫ ಲಕ್ಷ ವೆಚ್ಚದ ಘನ ತ್ಯಾಜ್ಯ ವಾಹನವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಲೋಕೇಶ್ ಲೊಕಾರ್ಪಣೆಗೊಳಿಸಿ ಘನತ್ಯಾಜ್ಯ ನಿರ್ವಹಣೆಯ ಸದಸ್ಯರಿಗೆ ಕೀ ಹಸ್ತಾಂತರಿಸಿ ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್‌ಉಪಾಧ್ಯಕ್ಷ ರಾಜು ಕೊಟ್ಯಾನ್ ಗರೋಡಿ, ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಮಾಜಿ ಉಪಾದ್ಯಕ್ಷೆ ವೀಣಾ ಆಚಾರ್ಯ ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಅಭಿವೃದ್ಧಿ ಅಧಿಕಾರಿ ಮಾಲಿನಿ,
ದ್ವಿ.ದರ್ಜೆಲೆಕ್ಕ ಸಹಾಯಕರು ಭಾರತಿ ಹಾಗೂ ಸಿಬ್ಬಂದಿಗಳು ಇದ್ದರು.