ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ೭೮ನೇ ಸ್ವಾತಂತ್ರ‍್ಯೋತ್ಸವ
ಕೈಕಂಬ: ಶ್ರೀ ರಾಜರಾಜೇಶ್ವರೀ ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ೭೮ನೇ ಸ್ವಾತಂತ್ರ‍್ಯೋತ್ಸವವನ್ನು ಸಂಭ್ರಮದಿAದ ಆಚರಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷ ವೆಂಕಟೇಶ ನಾವಡ ಧ್ವಜಾರೋಹಣೆಗೈದರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ಶುಭ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಲೋಕೇಶ್ ಭರಣಿ, ಚಂದ್ರಾವತಿ, ಯಶವಂತ ಪೊಳಲಿ, ಹಳೆ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರು ಉಪಸ್ಥಿತರಿದ್ದರು. ಶಾಲೆಯ ಹಳೆಯ ವಿದ್ಯಾರ್ಥಿಯಾದ ಪ್ರಸ್ತುತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಕಂದರಾಜ ಉಪಸ್ಥಿತರಿದ್ದರು. ಜಾನೆಟ್ ಲೋಬೊ ಕಾರ್ಯಕ್ರಮ ನಿರೂಪಿಸಿ ಮುಖ್ಯ ಶಿಕ್ಷಕ ಸುಬ್ರಾಯ ಪೈ ಎನ್ ಸ್ವಾಗತಿಸಿದರು. ಪೌಲಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ದೇಶಭಕ್ತಿ ಗೀತೆ ಮತ್ತು ಭಾಷಣ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು