ಎಡಪದವು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು
ಕೈಕಂಬ: ಶ್ರೀ ರಾಮ ಮಂದಿರ ಟ್ರಸ್ಟ್ (ರಿ) ತೆಂಕ ಎಡಪದವು ಇದರ ವತಿಯಿಂದ ೬೭ ನೇ ವರ್ಷದ ಕೃಷ್ಣಾ ಜನ್ಮಾಷ್ಟಮಿ ಹಾಗೂ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಶ್ರೀ ರಾಮ ಮಂದಿರದ ಪಟ್ಟಾಭಿರಾಮ ಸಭಾಭವನದಲ್ಲಿ ೧೧ರಂದು ಭಾನುವಾರ ಶಾಲಾ ಮಕ್ಕಳಿಗೆ ಹಾಗೂ ಪುರುಷರಿಗೆ ಮತ್ತು ಮಹಿಳೆಯರಿಗೆ ವಿಶೇಷ ವಾಗಿ ವಿವಿಧ ರೀತಿಯ ಕ್ರೀಡೆ ಗಳನ್ನು ಆಯೋಜಿಸಲಾಗಿತ್ತು.


ವಾಲಿಬಾಲ್, ಲಕ್ಕಿ ಗೇಮ್ , ಬಾಲ್ ಪಾಸಿಂಗ್, ಕಪ್ಪೆ ಜಿಗಿತ, ಜಂಪಿoಗ್ ರನ್ನಿಂಗ್ ರೇಸ್ , ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ, ಜ್ಯೂಸ್ ಕುಡಿಯುವ ಸ್ಫರ್ಧೆ, ಲಿಂಬೆ ಚಮಚ ಓಟ, ಒಂದು ಕಾಲಿನ ಓಟ ಈಗೆ ಹಲವು ಆಟೋಟ ಸ್ಪರ್ಧೆಗಳು ನಡೆಯಿತು.


ಶ್ರೀ ರಾಮ ಮಂದಿರ ಟ್ರಸ್ಟ್ನ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕ್ರೀಡೆಗಳನ್ನು ನಡೆಸಿಕೊಟ್ಟರು.
