ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ಬೋರ್ಟ್ ಬೆಂಕಿಗಾಹುತಿ : ಬೋಟ್ ಮುಳುಗಡೆ, ಮೀನುಗಾರರ ರಕ್ಷಣೆ
ಎರಡು ತಿಂಗಳ ರಜೆಯ ಬಳಿಕ ಮೀನುಗಾರರು ಮತ್ತೆ ಕಡಲಿಗೆ ಇಳಿದಿದ್ದಾರೆ. ಆದರೆ ಮೀನುಗಾರಿಕೆಯ ಋತು ಆರಂಭದಲ್ಲೇ ಸಮುದ್ರದ ಮಧ್ಯೆಯೇ ಅವಘಡವೊಂದು ಸಂಭವಿಸಿದೆ. ಮಂಗಳೂರು ಧಕ್ಕೆಯಿಂದ ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಬೋಟ್ ವೊಂದು ಸಮುದ್ರ ಮಧ್ಯೆಯೇ ಬೆಂಕಿಗಾಹುತಿಯಾದ ಘಟನೆಯು ನಡೆದಿದ್ದು, ಪ್ರಾಣಕ್ಕೆ ಯಾವುದೇ ಹಾನಿಯಾಗಿಲ್ಲ.ಹುಸೈನ್ ಎಂಬವರ ಮಾಲೀಕತ್ವದ ಸಫವಿ ಹೆಸರಿನ ಬೋಟ್ ಬೆಂಕಿಗಾಹುತಿಯಾಗಿದೆ.
ಸೋಮವಾರ ಬೆಳಗಿನ ಜಾವ 3ರಿಂದ 4 ಗಂಟೆಯ ಸುಮಾರಿಗೆ ಬೋಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ಕೂಡಲೇ ಬೋಟ್ನಲ್ಲಿದ್ದ 10 ಮಂದಿ ಮೀನುಗಾರರನ್ನು ಇನ್ನೊಂದು ಬೋಟ್ನಲ್ಲಿದ್ದವರು ರಕ್ಷಿಸಿದ್ದಾರೆ. ದಕ್ಕೆಯಿಂದ ಸುಮಾರು 88 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಮುಳುಗಡೆಯಾಗಿದ್ದು, ಸರಿಸುಮಾರು ಒಂದು ಕೋಟಿ ರೂ. ನಷ್ಟವಾಗಿದೆ ಎನ್ನಲಾಗಿದೆ.