ಕಣ್ಣು ಹೊಡೆದು ಸನ್ನೆ ಮಾಡಿದ ಯುವಕ, ಮಹಿಳೆಯಿಂದ ಯುವಕನಿಗೆ ಬಿತ್ತು ಚಪ್ಪಲಿ ಏಟು

ಕಣ್ಣು ಹೊಡೆದು ಸನ್ನೆ ಮಾಡಿದ ಎನ್ನುವ ಕಾರಣಕ್ಕೆ ಯುವಕನಿಗೆ ಮಹಿಳೆಯೂ ನಡುರಸ್ತೆಯಲ್ಲೇ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆಯೊಂದು ವಿಜಯಪುರ ಜಿಲ್ಲೆಯ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೌದು, ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಗೆ ಯುವಕನೊಬ್ಬನು ಅಸಭ್ಯವಾಗಿ ವರ್ತಿಸಿದ್ದಾನೆ.
ಕೋಪಗೊಂಡ ಮಹಿಳೆಯೂ ಮನಸ್ಸು ಇಚ್ಛೆ ಬಂದಂತೆ ಚಪ್ಪಲಿಯಿಂದ ಹೊಡೆದಿದ್ದಾಳೆ. ಇತ್ತ ಏಟು ತಿದ್ದ ಯುವಕನು ತಕ್ಷಣವೇ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಈ ಮಹಿಳೆ ಹಾಗೂ ಯುವಕನ ಹೆಸರು ತಿಳಿದು ಬಂದಿಲ್ಲ. ಈ ಘಟನೆಗೆ ಸಂಬಂಧಪಟ್ಟಂತೆ ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.