ಬಂಟ್ವಾಳ: ನೀನು ನನಗೆ ಬೇಕು, ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಅನ್ಯಕೋಮಿನ ಯುವಕ
ಬಂಟ್ವಾಳದಲ್ಲಿ ಒಂದು ಅಹಿತಕರ ಘಟನೆ ನಡೆದಿದ್ದು, ಅನ್ಯಕೋಮಿನ ಯುವಕ ಹಿಂದೂ ಧರ್ಮದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಕರಿಯಂಗಳದಲ್ಲಿ ನಡೆದಿದೆ. ಇದೀಗ ಈ ಬಗ್ಗೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಕೂಡ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ನೀನು ನನಗೆ ಬೇಕು, ನಿನ್ನನ್ನು ಅನುಭವಿಸದೆ ಬಿಡುವುದಿಲ್ಲ ಎಂದು ಅನ್ಯಕೋಮಿನ ಯುವಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆರೋಪಿಯನ್ನು ಕರಿಯಂಗಳ ನಿವಾಸಿ ತಸ್ಸೀಫ್ ಎಂದು ಹೇಳಲಾಗಿದೆ. ಆರೋಪಿಯೂ ಮಹಿಳೆ ತನ್ನ ಮಗಳನ್ನು ಟ್ಯೂಷನ್ ಗೆ ಬಿಟ್ಟು ಮನೆಗೆ ಹೋಗುತ್ತಿದ್ದ ವೇಳೆ ಅಡ್ಡಗಟ್ಟಿ ಎದೆಯ ಭಾಗಕ್ಕೆ ಕೈ ಹಾಕಿದ್ದಾನೆ ಎಂದು ಹೇಳಲಾಗಿದೆ.
ನೀನು ಸಿಗದೆ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿದ್ದಾನೆ ಈ ಹಿಂದೆಯೂ ಹೀಗೆ ಕಿಟಕಿಯಲ್ಲಿ ಇಣುಕಿ ಮಹಿಳೆಗೆ ತೊಂದರೆಯನ್ನು ನೀಡುತ್ತಿದ್ದಾನೆ, ಅನೇಕ ಬಾರಿ ಮಹಿಳೆ ಆತನಿಗೆ ಎಚ್ಚರಿಕೆಯನ್ನು ಕೂಡ ನೀಡಿದ್ದರು ಎಂದು ಹೇಳಲಾಗಿದೆ. ಅದರೂ ಆತನ ಯಾವುದೇ ರೀತಿಯಲ್ಲಿ ಬುದ್ಧಿಯನ್ನು ಕಲಿತಿಲ್ಲ. ಇದೀಗ ಮತ್ತೆ ಮಹಿಳೆಗೆ ದಾರಿಯಲ್ಲಿ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.