ಬಂಟ್ವಾಳ ವಕೀಲರ ಸಂಘಕ್ಕೆ ಭೇಟಿ ನೀಡಿದ ಹೈಕೋರ್ಟಿನ ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ
ಬಂಟ್ವಾಳ: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಆಡಳಿತಾತ್ಮಕ ನ್ಯಾಯಾಧೀಶರಾದ ಅಶೋಕ್ ಎಸ್ ಕಿಣಗಿ ಯವರು ಆ.3ರಂದು ಬಂಟ್ವಾಳ ವಕೀಲರ ಸಂಘಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬಂಟ್ವಾಳ ವಕೀಲರ ಸಂಘದ ಸಮಸ್ಯೆಗಳನ್ನು ಆಲಿಸದ ನ್ಯಾಯಾಧೀಶರಾದ ಅಶೋಕ್ ಎಸ್. ಕಿಣಗಿ ಅವರು ಇಲ್ಲಿನ ವಕೀಲರ ಅಶೋತ್ತರಗಳಿಗೆ ಸ್ಪಂದಿಸುವುದಾಗಿ ನೀಡಿದರು.
ಹೈಕೋರ್ಟ್ನ ನ್ಯಾಯಾಧೀಶರಾದ ರಾಜೇಶ್ ರೈ ಕಲ್ಲಂಗಳ, ಜಿಲ್ಲಾ ನ್ಯಾಯಧೀಶರಾದ ಶ್ರೀ ರವೀಂದ್ರ ಎಂ ಜೋಷಿ, ಬಂಟ್ವಾಳ ನ್ಯಾಯಾಲಯದ ನ್ಯಾಯಧೀಶರುಗಳಾದ ಭಾಗ್ಯಮ್ಮ, ಚಂದ್ರಶೇಖರ ವೈ.ತಳವಾರ, ಕೃಷ್ಣಮೂರ್ತಿ ಎನ್ ಅವರು ಉಪಸ್ಥಿತರಿದ್ದರು. ಇನ್ನು ಬಂಟ್ವಾಳ ವಕೀಲರ ಸಂಘದ ವತಿಯಿಂದ ಆಡಳಿತಾತ್ಮಕ ನ್ಯಾಯಾಧೀಶರಾದ ಅಶೋಕ್ ಎಸ್. ಕಿಣಗಿ ಅವರನ್ನು ಗೌರವಿಸಲಾಯಿತು.ವ
ಕೀಲರ ಸಂಘದ ಅಧ್ಯಕ್ಷರಾದ ರಿಚರ್ಡ್ ಕೊಸ್ತ ಎಂ ರವರು ಸ್ವಾಗತಿಸಿದರು. ನರೇಂದ್ರನಾಥ ಭಂಡಾರಿಯವರು ಕಾರ್ಯಕ್ರಮ ನಿರೂಪಿಸಿದರು.
ವಸತಿಗೃಹ ಉದ್ಘಾಟನೆ
ಇದಕ್ಕು ಮೊದಲು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ನ್ಯಾಯಾಧೀಶರಾದ ಅಶೋಕ್ ಎಸ್ ಕಿಣಗಿಯವರು ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶರಗಳ ನೂತನ ವಸತಿಗೃಹದ ಉದ್ಘಾನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಬಂಟ್ವಾಳದ ಹಿರಿಯ,ಕಿರಿಯ ವಕೀಲರು ಹಾಜರಿದ್ದರು.