Published On: Sat, Aug 3rd, 2024

ಬಂಟ್ವಾಳ: ತುಳುನಾಡು ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಜಿಲ್ಲೆಯ 2 ಅಶಕ್ತ ಕುಟುಂಬಕ್ಕೆ ಆರ್ಥಿಕ ನೆರವು

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಕಳೆದ 8 ವರ್ಷದಿಂದ ಸಮಾಜಮುಖಿ ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ. ಇದೀಗ ತಮ್ಮ ಸೇವಾ ಕಾರ್ಯದ ಭಾಗವಾಗಿ ಎರಡು ಅಶಕ್ತ ಕುಟುಂಬಕ್ಕೆ ಬಿ.ಸಿ ರೋಡ್ ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಸಹಾಯ ಧನ ನೀಡಲಾಯಿತು.

ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿರುವ ಕಡಬ ತಾಲೂಕಿನ ಏನೆಕಲ್ಲು ಮಾಧನ ಮನೆತೋಟ ನಿವಾಸಿ ಪದ್ಮಿನಿ ಲಕ್ಷ್ಮಣ ಗೌಡ ದಂಪತಿಗಳ 3 ವರ್ಷದ ಹೆಣ್ಣು ಮಗಳಾದ ವಂಶಿ ಅವರ ಚಿಕಿತ್ಸೆಗಾಗಿ 52,875 ರೂಪಾಯಿ ನೀಡಲಾಯಿತು.

ಇನ್ನು ಮೆದುಳಿನ ರಕ್ತ ಸ್ರಾವ ಸಮಸ್ಯೆಗೆ ತುತ್ತಾಗಿರುವ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಉಜಿರಡ್ಕ ಚಾರ್ಮತ ನಿವಾಸಿ ಗಂಗಾಧರ ನಾಯ್ಕ್ ಅವರ ಚಿಕಿತ್ಸೆಗೆ 15,000 ರೂಪಾಯಿ ಧನ ಸಹಾಯವನ್ನು ಈ ಸಂದರ್ಭದಲ್ಲಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter