ಪುತ್ತೂರಿನಲ್ಲಿ ಗುಡ್ಡ ಕುಸಿತ: ಮಾಣಿ-ಮೈಸೂರು ಹೆದ್ದಾರಿ ಬಂದ್
ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಕೆ ಬಳಿ ಇಂದು ಮುಂಜಾನೆ ಗುಡ್ಡ ಕುಸಿದಿದೆ. ಭೂಕುಸಿತದಿಂದಾಗಿ ಹೆದ್ದಾರಿಯ ಮೇಲೆ ಮಣ್ಣು ಬಿದ್ದಿದ್ದು, ರಸ್ತೆಯ ಎರಡೂ ತುದಿಗಳನ್ನು ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಇನ್ನು ಮಳೆ ನೀರಿನಿಂದ ಕೆಸರು ತುಂಬಿಕೊಂಡಿದ್ದು, ಕೆಸರಿನ ನೀರಿನ ರಭಕ್ಕೆ ದೇವಿ ದೇವಸ್ಥಾನ ಹಾಗೂ ಸಮೀಪದ ಮನೆ ಅಪಾಯದಲ್ಲಿದೆ.
ಪ್ರಸ್ತುತ ಮಾಣಿ-ಮೈಸೂರು ಹೆದ್ದಾರಿ ಹದಗೆಟ್ಟಿರುವ ಕಾರಣ ಮಡಿಕೇರಿ ಮತ್ತು ಮೈಸೂರು ಕಡೆಗೆ ಹೋಗುವವರಿಗೆ ಪುತ್ತೂರು ನಗರದ ಮೂಲಕ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಅದೃಷ್ಟವಶಾತ್ ರಸ್ತೆ ಕುಸಿತದ ವೇಳೆ ವಾಹನಗಳಾಗಲಿ, ಜನರಾಗಲಿ ಇರಲಿಲ್ಲ. ಹಾಗೂ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಹೇಳಲಾಗಿದೆ.