ಬಂಟ್ವಾಳ: ನೆರೆ ಪ್ರದೇಶ ಅಮುಂಜೆ ಗ್ರಾಮದ ಹೊಳೆಬದಿಗೆ ಸಚಿವರ ಜತೆ ಭೇಟಿ ನೀಡಿದ ಮಾಜಿ ಸಚಿವ ರಮಾನಾಥ ರೈ

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗಿದ್ದು, ಅನೇಕ ಕಡೆ ಗುಡ್ಡ ಕುಸಿತವಾಗಿದೆ. ಬಂಟ್ವಾಳದಲ್ಲಿ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅನೇಕ ಕಡೆ ಮಳೆಯಿಂದ ಮುಳುಗಡೆಯಾಗಿದೆ, ಕೆಲವೊಂದು ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅನೇಕ ಪಕ್ಷದ ನಾಯಕರು, ಶಾಸಕರು ಸೇರಿದಂತೆ ಜಲಾವೃತಗೊಂಡಿರುವ ಪ್ರದೇಶಗಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಆಂತಕಗೊಂಡ ಜನರಿಗೆ ಧೈರ್ಯ ಹೇಳಿದ್ದಾರೆ. ಇದೀಗ ಜಿಲ್ಲಾ ಉಸ್ತುವರಿ ಸಚಿವರ ಜತೆಗೆ ಮಾಜಿ ಸಚಿವ ರಮಾನಾಥ ರೈ ಬಂಟ್ವಾಳ ತಾಲೂಕಿನ ಅಮುಂಜೆ ಗ್ರಾಮದ ಹೊಳೆಬದಿ ನೆರೆ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಅನೇಕ ಕಡೆ ನೀರು ನಿಂತಿರುವ ಬಗ್ಗೆ ಹಾಗೂ ಪ್ರವಾಹಕ್ಕೆ ತತ್ತರಿಸುವ ಜನರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಅಧಿಕಾರಿಗಳೊಂದಿಗೆ ಸಚಿವರು ಹಾಗೂ ಮಾಜಿ ಶಾಸಕ ರಾಮನಾಥ ರೈ ಚರ್ಚಿಸಿದ್ದಾರೆ. ಗ್ರಾಮಸ್ಥರ ಜತೆಗೆ ಈ ಬಗ್ಗೆ ಆತಂಕಕ್ಕೆ ಒಳಗಾಗದಂತೆ ಮನವಿ ಮಾಡಿದ್ದಾರೆ. ಸಕಲದಲ್ಲಿ ಜನರಿಗೆ ಬೇಕಾದ ಎಲ್ಲ ರೀತಿ ಸಹಾಯಗಳನ್ನು ಮಾಡವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇನ್ನು ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಚಿವ ರಮಾನಾಥ ರೈ ಭೇಟಿ ವೇಳೆ ಕಾರ್ಪೋರೆಟರ್ ವಿನಯ ರಾಜ್ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ, ಪ್ರಮುಖರಾದ ಚಂದ್ರಹಾಶ ಪಲ್ಲಿಪಾಡಿ, ಉಮೇಶ್ ಆಚಾರ್ಯ ಕರಿಯಂಗಳ, ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧ ಲೋಕೇಶ್, ಅಮುಂಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಧಾಕೃಷ್ಣ ತಂತ್ರಿ, ರಾಜು ಕೋಟ್ಯಾನ್ ಗರೋಡಿ, ಹಾಗೂ ಪಂಚಾಯತ್ ಸದಸ್ಯರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ದನ್, ತಹಶಿಲ್ದಾರ್ ಅರ್ಚನಾ ಭಟ್, ತಾ.ಪಂ.ಇಒ.ಸಚಿನ್ ಕುಮಾರ್, ಪೋಲೀಸ್ ಇನ್ಸ್ ಪೆಕ್ಟರ್ ಗಳಾದ ಆನಂತಪದ್ಮನಾಭ, ಶಿವಕುಮಾರ್, ಕಂದಾಯ ನಿರೀಕ್ಷಕರುಗಳಾದ ವಿಜಯ್,ಜನಾರ್ದನ,ಪಿಡಿಒ ನಯನ, ಮಾಲಿನಿ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು