Published On: Fri, Aug 2nd, 2024

ಉಡುಪಿ: ಬ್ರಹ್ಮಗಿರಿಯಲ್ಲಿ ನಾಲ್ವರು ಮುಸುಕುಧಾರಿಗಳಿಂದ ಕಳ್ಳತನಕ್ಕೆ ಯತ್ನ

ಉಡುಪಿ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ನಾಲ್ವರು ಮುಸುಕುಧಾರಿಗಳು ಅಪಾರ್ಟ್‌ಮೆಂಟ್‌ಗೆ ನುಗ್ಗಲು ಯತ್ನಿಸಿದ ಘಟನೆ ನಡೆದಿದೆ. ಇದೀಗ ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳ ಸೆರೆಯಾಗಿದೆ. ವಿಡಿಯೋದಲ್ಲಿ ಬಟ್ಟೆಯ ಮುಖವಾಡಗಳನ್ನು ಹಾಕಿಕೊಂಡು ನಾಲ್ವರು ಅಪಾರ್ಟ್ಮೆಂಟ್ಗೆ ಬರಲು ಪ್ರಯತ್ನಿಸಿದ್ದಾರೆ. ಆದರೆ ಇದು ಸಾಧ್ಯವಾಗದೇ ಅಲ್ಲಿಂದ ಪರಾರಿಯಾಗಿದ್ದಾರೆ.

ಆಗಸ್ಟ್ 1 ರ ಮುಂಜಾನೆ, ಸುಮಾರು 3:00ರ ವೇಳೆ, ಮುಸುಕುಧಾರಿ ವ್ಯಕ್ತಿಗಳು, ಕಬ್ಬಿಣದ ರಾಡ್​​ಗಳನ್ನು ಹಿಡಿದುಕೊಂಡು ಖಾಲಿ ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಲು ಮುಂದಾಗಿದ್ದಾರೆ ಹೇಳಲಾಗಿದೆ.

ಇದೀಗ ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದ ಮುಂಬೈಯಲ್ಲಿರುವ ಹಿರಿಯ ನಾಗರಿಕ ದಂಪತಿಗೆ ಸೇರಿದ ಖಾಲಿ ಫ್ಲಾಟ್‌ ಎಂದು ಹೇಳಲಾಗಿದೆ. ಒಂದೇ ಪ್ರದೇಶದಲ್ಲಿ ಒಟ್ಟು ಮೂರು ಅಪಾರ್ಟ್‌ಮೆಂಟ್ ಕಟ್ಟಡಗಳಲ್ಲಿ ದರೋಡೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter