ರಾತ್ರಿ ಉಳಿದ ಅನ್ನದಿಂದ ಮಾಡಿ ರುಚಿ ರುಚಿಯಾದ ರೈಸ್ ಖೀರ್, ರೆಸಿಪಿ ಇಲ್ಲಿದೆ

ರಾತ್ರಿ ಮಾಡಿದ ಆಹಾರವನ್ನು ಮರುದಿನ ತಿನ್ನಲು ಯಾರು ಇಷ್ಟ ಪಡುವುದಿಲ್ಲ. ಅದರಲ್ಲಿಯೂ ಈ ಅನ್ನ ಉಳಿದರೆ ಏನು ಮಾಡುವುದೆಂದು ತಲೆ ಕೆಡಿಸಿಕೊಂಡು ಬಿಡುತ್ತಾರೆ. ಬಹುತೇಕರ ಮನೆಯಲ್ಲಿ ಈ ಸಮಸ್ಯೆ ಇದದ್ದೇ. ಹೀಗಾದಾಗ ಮನೆಯಲ್ಲಿ ಸುಲಭವಾಗಿ ಉಳಿದ ಅನ್ನದಿಂದ ವಿವಿಧ ರೆಸಿಪಿ ಮಾಡಿ ಸವಿಯಬಹುದು. ಹೀಗೆ ಮಾಡಿದ್ದಲ್ಲಿ ಅನ್ನ ಬಿಸಾಕಬೇಕು ಎನ್ನುವ ತಲೆ ನೋವು ಇರುವುದಿಲ್ಲ. ರಾತ್ರಿ ಉಳಿದ ಅನ್ನದಿಂದ ರೈಸ್ ಖೀರ್ ರೆಸಿಪಿಯನ್ನು ಸುಲಭವಾಗಿ ಮಾಡಬಹುದು. ಸಿಹಿಸಿಹಿಯಾಗಿರುವ ಈ ರೆಸಿಪಿಯೂ ಮನೆ ಮಂದಿಗೆಲ್ಲಾ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.
ರೈಸ್ ಖೀರ್ ಮಾಡಲು ಬೇಕಾಗುವ ಪದಾರ್ಥಗಳು
- ಉಳಿದ ಬೇಯಿಸಿದ ಅನ್ನ
- ಬೆಲ್ಲ
- ಹಾಲು
- ಏಲಕ್ಕಿ ಪುಡಿ
- ಗೋಡಂಬಿ
ರೈಸ್ ಖೀರ್ ಮಾಡುವ ವಿಧಾನ
- ಮೊದಲಿಗೆ ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಬಿಸಿಯಾಗುತ್ತಿದ್ದಂತೆ ಉಳಿದ ಬೇಯಿಸಿದ ಅನ್ನ, ಬೆಲ್ಲ ಮತ್ತು ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
- ಈ ಮಿಶ್ರಣವನ್ನು ಮಧ್ಯಮ ಉರಿಯಲ್ಲಿ ಹದಿನೈದು ನಿಮಿಷಗಳ ಕಾಲ ಕುದಿಸಲು ಬಿಡಿ.
- ನಂತರ ಖೀರ್ ಬೇಯುತ್ತಿದ್ದಂತೆ, ಏಲಕ್ಕಿ ಪುಡಿ ಮತ್ತು ಗೋಡಂಬಿ ಬೀಜಗಳನ್ನು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ.
- ಎರಡು ನಿಮಿಷಗಳ ಕಾಲ ಕುದಿಸಿ ಸ್ಟವ್ ಆಫ್ ಮಾಡಿ. ತಣ್ಣಗಾದ ಬಳಿಕ ರೈಸ್ ಖೀರ್ ಸವಿಯಿರಿ.