ಬಂಟ್ವಾಳ : ಬೀದಿಬದಿ ವ್ಯಾಪಾರಿಗಳ ಪಿ.ಯಂ.ಸ್ವ ನಿಧಿ ಹಾಗೂ ಸ್ವ ನಿಧಿ ಸೆ ಸಮೃದ್ಧಿ ಮೇಳಕ್ಕೆ ಚಾಲನೆ
ಬಂಟ್ವಾಳ ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಪಿ.ಯಂ.ಸ್ವ ನಿಧಿ ಹಾಗೂ ಸ್ವ ನಿಧಿ ಸೆ ಸಮೃದ್ಧಿ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಪುರಸಭಾ ಮುಖ್ಯಾಧಿಕಾರಿ ಶ್ರೀಮತಿ ಲೀನಾ ಬ್ರಿಟ್ಟೋ ಗಿಡಕ್ಕೆ ನೀರೆರೆದು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿಯಾದ ತೇಜಶ್ರೀಯವರು ಮಾತನಾಡಿದ್ದು, ‘ಡೆಂಗ್ಯೂ ಹಾಗು ವಿವಿಧ ಸಾಂಕ್ರಮಿಕ ರೋಗಗಳು ಹಾಗು ಸ್ವಚ್ಛತೆಯನ್ನು ಕಾಪಾಡಿ ಅದನ್ನು ತಡೆಗಟ್ಟುವ ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡಿದರು. ಇಂಡಿಯನ್ ಓವರ್ ಸೀಸ್ ಬ್ಯಾಂಕಿನ ವ್ಯವಸ್ಥಾಪಕರಾದ ಪ್ರವೀಣ್ ಇವರು ಬ್ಯಾಂಕ್ ಸೌಲಭ್ಯಗಳು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ನಗರ ವ್ಯವಸ್ಥಾಪಕಿಯಾದ ಐರಿನ್ ರೆಬೆಲ್ಲೋ,’ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ, ವ್ಯಾಪಾರ ನಿಯಂತ್ರಣ ಅಧಿನಿಯಮದ ಬಗ್ಗೆ ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಗಳಾದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘವು ಎಷ್ಟು ಪ್ರಾಮುಖ್ಯವಾಗಿದೆ ಎನ್ನುವ ಬಗ್ಗೆ ಸವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕೈಕಂಬದ ಆರೋಗ್ಯ ನಿರೀಕ್ಷಣಾಧಿಕಾರಿ ಬಂಟ್ವಾಳ ನಗರ ವ್ಯಾಪ್ತಿಯ ವಿವಿಧ ಬ್ಯಾಂಕಿನ ಅಧಿಕಾರಿಗಳು, ನಗರ ಮಟ್ಟದ ಒಕ್ಕೂಟದ ಅಧ್ಯಕ್ಷರಾದ ವಸಂತಿ ಪಟ್ಟಣ, ಮಾರಾಟ ಸಮಿತಿ ಸದಸ್ಯರುಗಳು ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಮಂಗಳ ಸ್ವಾಗತಿಸಿ, ಸಮುದಾಯ ಸಂಘಟಕಿ ಉಮಾವತಿ ನಿರೂಪಿಸಿ ಹಾಗೂ ಸಿ.ಆರ್.ಪಿ, ಗೀತಾ ಧನ್ಯವಿತ್ತರು.