Published On: Thu, Aug 1st, 2024

ಉಡುಪಿ: ಬಸ್​​ ಬ್ರೇಕ್​​​ ಫೇಲ್ ಆಗಿ ಸ್ಕೂಟರ್‌​​ಗೆ ಡಿಕ್ಕಿ, ಸವಾರ ಸ್ಥಳದಲ್ಲೇ ಸಾವು

ಉಡುಪಿಯಲ್ಲಿ ಖಾಸಗಿ ಬಸ್‌ ಒಂದರ ಬ್ರೇಕ್​​​ ಫೇಲ್ ​​ಆಗಿ, ನಾಗರಿಕರೊಬ್ಬರಿಗೆ ಡಿಕ್ಕಿ ಹೊಡೆದಿದೆ. ಆ ವ್ಯಕ್ತಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಉಡುಪಿಯ ಕಲ್ಮಾಡಿಯಲ್ಲಿ ನಡೆದಿದೆ. ಉಡುಪಿಯಿಂದ ಮಲ್ಪೆಗೆ ತೆರಳುತ್ತಿದ್ದ ಬಸ್‌ ತಾಂತ್ರಿಕ ದೋಷದಿಂದ ಎದುರಿನಿಂದ ಬಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್​​ ನಜ್ಜುಗುಜ್ಜಾಗಿದೆ. ಸವಾರ, ನಿವೃತ್ತ ಮುಖ್ಯೋಪಾಧ್ಯಾಯ ಭಾಸ್ಕರ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter