ಮಂಗಳೂರು: ಗಾಳಿ-ಮಳೆ ಹೆಚ್ಚಾಗುವ ಸಾಧ್ಯತೆ, ಸಮುದ್ರಕ್ಕೆ ಇಳಿದಂತೆ ಮೀನುಗಾರರಿಗೆ ಸೂಚನೆ
ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮಳೆ-ಗಾಳಿ ಹೆಚ್ಚಾಗಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಆದೇಶ ನೀಡಲಾಗಿದೆ. ಇಂದಿನಿಂದ ಮೀನುಗಾರಿಕೆ ಇಳಿಬೇಕಿತ್ತು ಆದರೆ ಹವಾಮಾನ ವೈಪರೀತ್ಯದಿಂದಾಗಿ ಸಮುದ್ರಕ್ಕೆ ಹೋಗದಂತೆ ಸ್ಥಳೀಯ ಆಡಳಿತ ಆದೇಶ ನೀಡಿದೆ. ಕಳೆದ 61 ದಿನಗಳ ಕಾಲ ಅಂದರೆ ಜುಲೈ 31ರವರೆಗೆ ಯಾಂತ್ರೀಕೃತ ಸಮಸ್ಯೆಯಿಂದ ಮೀನುಗಾರಿಕೆ ನಿಷೇಧ ನೀಡಲಾಗಿತ್ತು.
IMD ಪ್ರಕಾರ, ಆಗಸ್ಟ್ 1 ರ ಬೆಳಿಗ್ಗೆ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವೇಗದ ಗಾಳಿ ಇರುವ ಕಾರಣ ಇದರಿಂದಾಗಿ ಅಲೆಗಳು ಎತ್ತರಕ್ಕೆ ಏರುತ್ತದೆ. ಮೀನುಗಾರಿಕಾ ದೋಣಿಗಳಿಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಹೇಳಿದೆ.
ಈಗಾಗಲೇ ಮೀನುಗಾರರು ಹೊಸ ಮೀನುಗಾರಿಕೆ ಋತುವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ದೋಣಿಗಳು, ಇಂಜಿನ್‌ಗಳು ಮತ್ತು ಮೀನುಗಾರಿಕೆ ಬಲೆಗಳನ್ನು ದುರಸ್ತಿ ಮಾಡಲಾಗಿದೆ. ಜತೆಗೆ ಐಸ್ ಪ್ಲಾಂಟ್‌ಗಳು ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. 15 ದಿನಗಳ ಮೀನುಗಾರಿಕೆ ಹೋಗಲು ದಿನಸಿ ಮತ್ತು ಇತರ ಸರಬರಾಜುಗಳನ್ನು ಸಂಗ್ರಹಿಸಲಾಗಿದೆ.
ಇದೀಗ ಆದೇಶ ನಂತರ ಮೀನುಗಾರಿಕೆ ಬೋಟ್‌ಗಳಲ್ಲಿ ಕೆಲಸ ಮಾಡುವ ಅನೇಕ ಕಾರ್ಮಿಕರು ಹೊರ ರಾಜ್ಯದವರಾಗಿದ್ದು, ಮಂಗಳೂರು ಮತ್ತು ಉಡುಪಿಯ ಮೀನುಗಾರಿಕಾ ಬಂದರುಗಳಿಗೆ ಮರಳಿದ್ದಾರೆ.