ವಿಜಯಪುರ : ಯುವತಿಯನ್ನು ಬೆತ್ತಲೆಗೊಳಿಸಿ ಮನಬಂದಂತೆ ಥಳಿಸಿದ ಮಂಗಳಮುಖಿಯರು

ಮಂಗಳಮುಖಿ ಎಂದು ಹೇಳಿಕೊಂಡು ದುಡ್ಡು ಕೇಳುತ್ತಿದ್ದಳು ಎನ್ನುವ ಕಾರಣಕ್ಕೆ ಯುವತಿಯನ್ನು ಮಂಗಳಮುಖಿಯಾರೇ ಥಳಿಸಿದ್ದಾರೆ. ವಿಜಯಪುರದ ಕೇಂದ್ರ ಬಸ್ ನಿಲ್ದಾಣದಿಂದ ಯುವತಿಯನ್ನು ಅಟ್ಟಾಡಿಸಿಕೊಂಡು ಬಂದ ಮಂಗಳಮುಖಿಯರು ಲಲಿತ ಮಹಲ್ , ಹಾಗೂ ಮಿಶ್ರ ಪೇಡಾ ಮುಂಭಾಗದಲ್ಲಿ ಯುವತಿಯನ್ನು ಹಿಡಿದು ಮನಬಂದಂತೆ ಥಳಿಸಿರುವ ಮೂಲಕ ಅವಮಾನವೀಯತೆಯನ್ನು ಮೆರೆದಿದ್ದಾರೆ.
ಅಷ್ಟೇ ಅಲ್ಲದೇ, ಯುವತಿಯ ಪ್ಯಾಂಟ್, ಶರ್ಟ್ ಬಿಚ್ಚಿ ಬೆತ್ತಲೆಗೊಳಿಸಿ ಥಳಿಸಿದ್ದು, ಮರ್ಮಾಂಗಕ್ಕೂ ಒದ್ದು, ಖಾರದಪುಡಿ ಹಾಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕರ ಎದುರಲ್ಲೇ ಏಳೆಂಟು ಮಂಗಳಮುಖಿಯರು ಅಮಾನವೀಯ ಕೃತ್ಯ ಎಸಗಿದ್ದಾರೆ. ಆದರೆ ಈ ಘಟನೆ ನಡೆದರೂ ಜನರು ಸಾರ್ವಜನಿಕರು ನಿಂತು ನೋಡುತ್ತಿದ್ದದ್ದು ಮಾತ್ರವಲ್ಲ, ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು ಎನ್ನಲಾಗಿದೆ.
ಅಷ್ಟೇ ಅಲ್ಲದೇ ಹಲ್ಲೆ ನಡೆಸಿದ ಬಳಿಕ ಮಂಗಳಮುಖಿಯರು ಸೀರೆ ಎತ್ತಿ ತಮ್ಮ ಮರ್ಮಾಂಗ ತೋರಿಸಿ ಅಸಹ್ಯಕರವಾಗಿ ವರ್ತಿಸಿದ್ದಾರೆ. ಆದರೆ ಈ ಘಟನೆಯೂ ಕಳೆದ ಹದಿನೈದು ದಿನಗಳ ಹಿಂದೆಯೇ ನಡೆದಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರೂ ಕೂಡ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನುವುದೇ ವಿಪರ್ಯಾಸ.