ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದ ಮತ್ತೊಂದು ಶ್ವಾನ
ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ. ಈ ರಕ್ತದಾನದಿಂದ ಒಬ್ಬರ ಜೀವ ಉಳಿಸಬಹುದು ಎನ್ನುವುದು ಎಲ್ಲರಿಗೂ ತಿಳಿದಿದೆ. ಮನುಷ್ಯನು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಿರುವ ಉದಾಹರಣೆಗಳು ಸಾಕಷ್ಟಿವೆ. ಆದರೆ ಇಲ್ಲೊಂದು ನಾಯಿ ಇನ್ನೊಂದು ನಾಯಿಗೆ ರಕ್ತವನ್ನು ನೀಡುವ ಮೂಲಕ ಜೀವ ಉಳಿಸಿದೆ. ಈ ಘಟನೆಯೂ ಕೊಪ್ಪಳದಲ್ಲಿ ನಡೆದಿದೆ.
ಪ್ರಾಧ್ಯಾಪಕ ಬಸವರಾಜ ಪೂಜಾರ್ ರವರ ಸಾಕು ನಾಯಿ ಮೂರು ವರ್ಷದ ಭೈರವ ಹೆಸರಿನ (ಡಾಬರ್ ಮ್ಯಾನ್) ಶ್ವಾನವು ರಕ್ತವನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದೆ. ಹೌದು, ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ಕಾರಣ ಈ ಒಂಬತ್ತು ವರ್ಷದ ಲ್ಯಾಬರ್ ಡಾಗ್ ನಾಯಿಗೆ ಅನಾರೋಗ್ಯದಿಂದ ಬಳಲುತ್ತಿತ್ತು. ಈ ಲ್ಯಾಬರ್ ಡಾಗ್ ಗೆ ರಕ್ತದ ಅವಶ್ಯಕತೆಯಿತ್ತು.
ಹೀಗಾಗಿ ವೈದ್ಯರು ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪಕಿ೯ಸಿ ಶ್ವಾನಗಳನ್ನು ಕರೆಸಿದ್ದರು. ಅವುಗಳ ರಕ್ತದ ಶಾಂಪಲ್ ಗಳನ್ನು ತೆಗೆದುಕೊಂಡು ಪರೀಕ್ಷೆಯನ್ನು ನಡೆಸಿದರು. ಈ ವೇಳೆಯಲ್ಲಿ ಪ್ರೊ.ಬಸವರಾಜ್ ಪೂಜಾರ್ ರವರ 3 ವರ್ಷದ ಡಾಬರ್ ಮ್ಯಾನ್ ತಳಿಯ ರಕ್ತವು ಹೊಂದಿಕೆಯಾಗಿದೆ. ಆ ಬಳಿಕ ಕುತ್ತಿಗೆಯ ಭಾಗದಿಂದ 12 ನಿಮಿಷಗಳಲ್ಲಿ ರಕ್ತವನ್ನು ಪಡೆದು ದೈಹಿಕವಾಗಿ ನಿತ್ರಾಣವಾಗಿದ್ದ ಲ್ಯಾಬರ್ ಡಾಗ್ ಗೆ ನೀಡಿ ಜೀವ ಉಳಿಸಿದ್ದಾರೆ. ಒಟ್ಟಿನಲ್ಲಿ ರಕ್ತದಾನ ಮಾಡಲು ಹಿಂಜರಿಯುವವರಿಗೆ ಈ ಶ್ವಾನವು ಮಾದರಿಯಾಗಿದೆ.