ಕರಿದ ಎಣ್ಣೆಯೂ ಕಪ್ಪಾಗಿದ್ದರೆ ಸ್ವಚ್ಛಗೊಳಿಸುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಅಡುಗೆಗೆ ಎಣ್ಣೆಯಿಲ್ಲದೇ ಹೋದರೆ ಅದರ ರುಚಿಯೇ ಇರುವುದಿಲ್ಲ. ಅದರಲ್ಲಿಯೂ ಒಗ್ಗರಣೆ ಅಥವಾ ತಿಂಡಿ ತಿನಿಸುಗಳನ್ನು ಎಣ್ಣೆ ಇರಲೇಬೇಕು. ಆದರೆ ಕರಿದ ಎಣ್ಣೆಯನ್ನು ಒಗ್ಗರಣೆಗೆ ಅಥವಾ ಇನ್ನಿತ್ತರ ಆಹಾರವನ್ನು ತಯಾರಿಸುವಾಗ ಬಳಸುವುದಿದೆ. ಹೆಚ್ಚಿನವರು ಈ ಎಣ್ಣೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಆದರೆ ಇದರಲ್ಲಿ ಕರಿದ ತಿನಿಸಿದ ಕಣಗಳು ತುಂಬಿರುತ್ತದೆ. ಅದಲ್ಲದೇ ಪದೇ ಪದೇ ಇದನ್ನು ಬಳಕೆ ಮಾಡುತ್ತಿದ್ದರೆ ಆರೋಗ್ಯದ ಮೇಲೂ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ.
- ಮೊಟ್ಟೆಯ ಬಿಳಿಭಾಗವನ್ನು ಕರಿದ ಎಣ್ಣೆಯನ್ನು ಕ್ಲೀನ್ ಮಾಡಲು ಬಳಸಿಕೊಳ್ಳಬಹುದು. ಎಣ್ಣೆಗೆ ಮೊಟ್ಟೆಯ ಬಿಳಿಭಾಗವನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಬಿಸಿ ಮಾಡಿದಾಗ ಕರಿದ ಎಣ್ಣೆಯಲ್ಲಿರುವ ಕೊಳಕಾದ ಅಂಶವು ಬೇರೆಯಾಗಿ ಸ್ವಚ್ಛವಾಗುತ್ತದೆ.
- ಕರಿದ ಎಣ್ಣೆಯನ್ನು ಸ್ವಚ್ಛಗೊಳಿಸಲು ಕಾಫಿ ಫಿಲ್ಟರ್ ಬಳಸಬಹುದು. ಕರಿದ ಎಣ್ಣೆ ತಣ್ಣಗಾಗಲು ಬಿಟ್ಟು,ಇದಕ್ಕಾಗಿ ಚೀಸ್ ಕ್ಲೋತ್ ಬಳಸಿಕೊಂಡು ಫಿಲ್ಟರ್ ಮೂಲಕ ಎಣ್ಣೆಯನ್ನು ಸೋಸಿಕೊಳ್ಳಿ. ಹೀಗೆ ಮಾಡಿದ್ದಲ್ಲಿ ಎಣ್ಣೆಯೂ ಸ್ವಚ್ಛವಾಗುತ್ತದೆ.
- ಕರಿದ ತಿಂಡಿಯ ಕಣಗಳು ಎಣ್ಣೆಯಲ್ಲಿದ್ದರೆ ಆಲೂಗಡ್ಡೆಯನ್ನು ಬಳಸಿ ಸ್ವಚ್ಛಗೊಳಿಸಬಹುದು. ಈಗಾಗಲೇ ಬಳಸಿದ ಎಣ್ಣೆಯನ್ನು ಬಿಸಿ ಮಾಡಿ ಇದಕ್ಕೆ ಆಲೂಗಡ್ಡೆ ತುಂಡುಗಳನ್ನು ಹಾಕಿ ಚೆನ್ನಾಗಿ ಕರಿಯಿರಿ. ಹೀಗೆ ಮಾಡಿದ್ದಲ್ಲಿ ಕೊಳಕು ಅಂಶಗಳು ಆಲೂಗಡ್ಡೆಯಲ್ಲಿ ಸೇರಿ ಎಣ್ಣೆಯೂ ಸ್ವಚ್ಛವಾಗುತ್ತದೆ.
- ಮನೆಯಲ್ಲಿ ನಿಂಬೆ ಹಣ್ಣು ಇದ್ದರೆ ಕೊಳಕು ಎಣ್ಣೆಯನ್ನು ಸ್ವಚ್ಛ ಮಾಡಲು ಬಳಸಿಕೊಳ್ಳಿ. ಎಣ್ಣೆ ಬಿಸಿ ಮಾಡಿ, ಅದಕ್ಕೆ ನಿಂಬೆಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಹಾಕಿಕೊಳ್ಳಿ. ಆ ಕೂಡಲೇ ಎಣ್ಣೆಯಲ್ಲಿರುವ ಬೇಡದ ಕಣಗಳು ನಿಂಬೆ ಹಣ್ಣಿನ ಮೇಲೆ ಅಂಟಿಕೊಳ್ಳುತ್ತವೆ. ಈ ಮೂಲಕ ಸುಲಭವಾಗಿ ಬಳಸಿದ ಅಡುಗೆ ಎಣ್ಣೆಯನ್ನು ಸ್ವಚ್ಛಗೊಳಿಸಿ ಮರು ಬಳಕೆ ಮಾಡಬಹುದು.