ಬೀದಿಯಲ್ಲಿ ಹೋಗುತ್ತಿದ್ದ ವೃದ್ಧನಿಗೆ ತಿವಿದ ದನ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗದಗ ನಗರದ ಬೆಟಗೇರಿಯಲ್ಲಿ ಒಂದು ಭಯಾನಕ ಘಟನೆಯೊಂದು ನಡೆದಿದೆ. ಈ ಬಗ್ಗೆ ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯ ಪತ್ತೆಯಾಗಿದೆ. ಬಿದಿಯಲ್ಲಿ ಮಲಗಿದ್ದ ದನವೊಂದು ಏಕಾಏಕಿ ಬಂದು ವೃದ್ಧನನ್ನು ಕೊಂಬಿನಿಂದ ತಿವಿದು ಕೊಂದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ವೃದ್ಧನನ್ನು ದನವೊಂದು ಏಕಾಏಕಿ ತಿವಿದು ಸಾಯಿಸಿದೆ. ಗದಗ ನಗರದ ಬೆಟಗೇರಿಯಲ್ಲಿ ಬೆಳಗ್ಗೆ 7.30ಕ್ಕೆ ಘಟನೆ ನಡೆದಿದೆ. ಈ ದೃಶ್ಯವನ್ನು ಕಂಡು ಅಲ್ಲಿನ ಜನ ಭಯಗೊಂಡಿದ್ದಾರೆ. ದನಕ್ಕೆ ಏಕಾಏಕಿ ಮದವೇರಿದೆ. ದಾರಿಯಲ್ಲಿ ಹೋಗುತ್ತಿದ್ದ ವೃದ್ದನ ಮೇಲೆ ಏಕಾಏಕಿ ದಾಳಿ ಮಾಡಿದೆ. ದನದ ಕೋಪವನ್ನು ನೋಡಿ ಜನರು ಅಚ್ಚರಿಪಟ್ಟಿದ್ದಾರೆ.
ವೃದ್ಧನ ಮೇಲೆ ಎರಡ್ಮೂರು ಬಾರಿ ದನ ತಿವಿದೆ. ವೃದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬೆಟಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.