ನಿರ್ಗತಿಕ ಕುಟುಂಬದ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ರಘು ಸಾಲ್ಯಾನ್
ಗುರುಪುರ : ಕರೋನಾ ಮಹಾಮಾರಿ ಸಂದರ್ಭದಲ್ಲಿ ವಾಮಂಜೂರು, ಇರುವೈಲು, ಬೊಂಡAತಿಲ ಮತ್ತಿತರ ಪ್ರದೇಶದಲ್ಲಿ ಜನರ ಕಷ್ಟಗಳಿಗೆ ಖುದ್ದಾಗಿ ಸ್ಪಂದಿಸಿದ್ದ, ಸದಾ ಸಮಾಜ ಸೇವೆಯಲ್ಲಿ ನಿರತರಾಗಿರುವ ವಾಮಂಜೂರು ತಿರುವೈಲಿನ ಉದ್ಯಮಿ ರಘು ಸಾಲ್ಯಾನ್ ಅವರು ಈ ಬಾರಿ ನಿರ್ಗತಿಕ ಕುಟುಂಬವೊAದರ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಸ್ವಯಂ ಭಾಗಿಯಾದ ಸಂಗತಿ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಬೊಂಡAತಿಲ ಕಟ್ಟಿಂಜೆಯ ಬಡ ಮಹಿಳೆ ಕಮಲಾ ಎಂಬವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾಯಿಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕಳೆದ ವಾರ ಮಂಗಳಜ್ಯೋತಿಯ ಆವೆ ಮರಿಯಾ ನಿರ್ಗತಿಕರ ಆಸರೆ ಕೇಂದ್ರಕ್ಕೆ ಸೇರಿಸಲಾಗಿತ್ತು. ದುರದೃಷ್ಟವಶಾತ್ ಗುರುವಾರ ಮಹಿಳೆ ತೀರಿಕೊಂಡರು. ಈಕೆಗೆ ಇಬ್ಬರು ಪುತ್ರಿಯರಿದ್ದು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ತಾಯಿ ಮೃತಪಟ್ಟ ದುಃಖದಲ್ಲಿದ್ದ ಮಕ್ಕಳು, ಮಾತೆಯ ಅಂತ್ಯ ಸಂಸ್ಕಾರಕ್ಕೆ ಚಿಕ್ಕಾಸೂ ಇಲ್ಲ ಎಂಬ ಬೇಸರದಲ್ಲಿದ್ದರು. ಈ ವೇಳೆ ನಿರ್ಗತಿಕ ಕುಟುಂಬಕ್ಕೆ ಆಪದ್ಬಾಂಧವರAತೆ ಒದಗಿ ಬಂದವರು ರಘು ಸಾಲ್ಯಾನ್ !
ಮಗಳಿಂದ ಅಂತ್ಯಸAಸ್ಕಾರ :
ಸಾಮಾನ್ಯವಾಗಿ ಗಂಡು ಮಕ್ಕಳು ಪಾಲಕರ ಚಿತೆಗೆ ಅಗ್ನಿ ಸ್ಪರ್ಶ ಮಾಡಬೇಕೆಂಬ ಪ್ರತೀತಿ ಇದೆ. ಗಂಡು ಮಕ್ಕಳಿಲ್ಲದಿದ್ದರೆ, ಸಂಬAಧಿ ಗಂಡು ಮಕ್ಕಳಿಂದ ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಸಂಪ್ರದಾಯವಿದೆ. ಆದರೆ ಗಂಡು ಮಕ್ಕಳಿಲ್ಲದ ಕಮಲಾ ಅವರ ಪ್ರೀತಿಯ ಹಿರಿ ಮಗಳೇ ಚಿತೆಗೆ ಅಗ್ನಿ ಸ್ಪರ್ಶ ಮಾಡುವಂತೆ ರಘು ಸಾಲ್ಯಾನ್ ಪ್ರೇರೇಪಿಸಿ, ಸಹಕರಿಸಿದ್ದಾರೆ. ಮೂಡುಶೆಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಸಾಲ್ಯಾನ್ ಅವರೊಂದಿಗೆ ಇದ್ದ ಒಂದಿಬ್ಬರು ಹಿರಿಯರ ಮಾತಿನಂತೆ ತಾಯಿಯ ಚಿತೆಗೆ ಮಗಳೇ ಅಗ್ನಿ ಸ್ಪರ್ಶ ಮಾಡಿದ್ದಾರೆ.