ಕೈಕಂಬ: ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಗಿರೀಶ್ ಎಂಬವರು ಕಾಣೆಯಾಗಿದ್ದಾರೆ ಎಂಬ ದೂರು ಪೂಂಜಲ್‌ಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದಾರೆ.

ಬುಧವಾರ ತಡರಾತ್ರಿ ೨ ಗಂಟೆ ಸುಮಾರಿಗೆ ಬಾಡಿಗೆ ಹೋಗಲು ಇದೆ ಎಂದು ಹೇಳಿ ತೆರಳಿರ‍್ದು ಬುಧವಾರ ರಾತ್ರಿ ಗಸ್ತುನಲ್ಲಿದ್ದ ಪೊಲೀಸರು ಪೊಳಲಿ ಸೇತುವೆ ಮೇಲೆ ರಿಕ್ಷಾ ಒಂದು ಅಡ್ಡವಾಗಿ ನಿಂತಿದ್ದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ರಿಕ್ಷಾದಲ್ಲಿ ಯಾರೂ ಇಲ್ಲದೇ ಇರುವುದರಿಂದ ರಿಕ್ಷಾವನ್ನು ಪರೀಸೀಲಿಸಿದ ಪೊಳಿಸರು ಗಿರೀಶನ ಮನೆಗೆ ಮಾಹಿತಿ ತಿಳಿಸಿದ್ದಾರೆ.

ಅಡ್ಡೂರು-ಪೊಳಲಿ ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ವಾಮದಪದವು ಸಮೀಪದ ಕುಕ್ಕಿಪಾಡಿ ಬಾಬು ಪೂಜರಿಯವರ ಪುತ್ರ ಗಿರೀಶ್ (೩೫) ಏಣ್ಮೂರು ಶ್ರೀ ನಾಗಬೃಹ್ಮ ದೈವಸ್ಥಾನದ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು ಇವರಿಗೆ ಪತ್ನಿ ಇಬ್ಬರು ಪುಟ್ಟ ಮಕ್ಕಳಿದ್ದಾರೆ.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಾಕ ದಳದವರು ನದಿಯಲ್ಲಿ ಹುಡುಕಾಟ ನಡೆಸುತ್ತಿದೆ

By Suddi9

Leave a Reply

Your email address will not be published. Required fields are marked *