ಸಿದ್ದರಾಮಯ್ಯರದ್ದು ಸ್ಕ್ಯಾಮ್ ಸರ್ಕಾರ : ಡಾ. ಭರತ್ ಶೆಟ್ಟಿ ಲೇವಡಿ

ಕೈಕಂಬ: ಸಿದ್ದರಾಮಯ್ಯನವರದ್ದು ಸ್ಕಾö್ಯಮ್‌ಗಳ(ಹಗರಣ) ಸರ್ಕಾರ. ಭ್ರಚ್ಟಾಚಾರ ಅತಿರೇಕಕ್ಕೇರಿದೆ. ಮೂಡಾ, ವಾಲ್ಮೀಕಿ ನಿಗಮದಲ್ಲೂ ಭ್ರಷ್ಟಾಚಾರ. ಸರ್ಕಾರ ನಡೆಸುತ್ತಿರುವ ಭ್ರಷ್ಟಾಚಾರ ಹೇಳುತ್ತ ಹೋದರೆ ದಿನಕ್ಕೊಂದು ಪ್ರತಿಭಟನೆ ನಡೆಸಬಹುದು. ಹಾಲು, ಪೆಟ್ರೋಲ್, ಡೀಸೆಲ್, ಮುದ್ರಾಂಕ ದರ, ಆಲ್ಕೋಹಾಲ್ ಬೆಲೆ ಏರಿಸಿರುವ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನರನ್ನು ನರಕದ ಕೂಪಕ್ಕೆ ತಲ್ಲಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಗುಡುಗಿದರು.

ಅವರು ಶುಕ್ರವಾರ ಗುರುಪುರ ಕೈಕಂಬ ಜಂಕ್ಷನ್‌ನಲ್ಲಿ ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾವು ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು, ರೈತ ವಿರೋಧಿಯಾಗಿರುವ ಕಾಂಗ್ರೇಸ್ ಸರ್ಕಾರ ರಸಗೊಬ್ಬರ ಮತ್ತು ಕೃಷಿ ಬೀಜದ ಬೆಲೆ ಏರಿಸಿ ಗ್ಯಾರಂಟಿಗಾಗಿ ಭ್ರಷ್ಟಾಚಾರದ ಮಾರ್ಗ ಹಿಡಿದಿದೆ ಎಂದರು.

ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ರಕ್ತ ಕುಡಿಯುತ್ತಿದೆ. ಅಧಿಕಾರ ತ್ಯಜಿಸುವುಕ್ಕಿಂತ ಮುಂಚೆ ಸಾಕಷ್ಟು ಸೈಟು ಮಾಡುವ ಗುರಿ ಇಟ್ಟುಕೊಂಡಿರುವ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಶೀಘ್ರ ಜನರು ಉತ್ತರ ಕೊಡಲಿದ್ದಾರೆ ಎಂದರು.

ಮಹಿಳಾ ಬಿಜೆಪಿ ಕಾರ್ಯಕರ್ತರು ಹಾಲುರಹಿತ ಚಹಾ ಸಿದ್ಧಪಡಿಸಿ ಹಾಲಿನ ದರದ ವಿರುದ್ಧ ಸಾಂಕೇತಿಕ ಪ್ರತಿಭಟನೆ

ಬಿಜೆಪಿ ನಾಯಕಿ ಅಮೃತಲಾಲ್ ಡಿ’ಸೋಜ ಮಾತನಾಡಿ, ಹಾಲಿನ ದರ ಏರಿಸಿ ಮಹಿಳೆಯರ ಪಾಲಿಗೆ ವಿಲನ್ ಆಗಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ವಿಷಯದಲ್ಲಿ ಮೌನವಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಸರ್ಕಾರದಿಂದ ಒಂದು ರೋಡ್ ಅಥವಾ ತೋಡು ಮಾಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಸಂದೀಪ್ ಪಚ್ಚನಾಡಿ, ಆನಂದ ಪಾಂಗಳ, ರಣದೀಪ್ ಕಾಂಚನ್, ತಮ್ಮಯ್ಯ, ರೇಖಾ ರಾಜೇಶ್, ಪವಿತ್ರಾ, ಸ್ವಪ್ನಾ, ಸುಕೇಶ್ ಮಾಣೈ, ರಾಜೇಶ್ ಸುವರ್ಣ, ಜಿ. ಎಂ. ಉದಯ ಭಟ್, ಸಬಿತಾ ಬೇಂಗ್ರೆ, ಸೋಹನ್ ಅತಿಕಾರಿ, ಶೋಧನ್ ಆದ್ಯಪಾಡಿ, ಚಂದ್ರಹಾಸ ಶೆಟ್ಟಿ ನಾರ್ಲ, ಸಚಿನ್ ಅಡಪ, ವಿವಿಧ ಪಂಚಾಯತ್‌ಗಳ ಬಿಜೆಪಿ ಬೆಂಬಲಿದ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಪ್ರತಿಭಟನಾ ಸಭೆ ಬಳಿಕ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು ಕೈಕಂಬ ಜಂಕ್ಷನ್‌ನಲ್ಲಿ ಹೆದ್ದಾರಿ ಮಧ್ಯೆ ಕುಳಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಂದೋಬಸ್ತಿನಲ್ಲಿದ್ದ ಬಜ್ಪೆ ಪೊಲೀಸರು ತಕ್ಷಣ ಶಾಸಕರ ಸಹಿತ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ಬಜ್ಪೆ ಠಾಣೆಗೆ ಕರೆದೊಯ್ದರು.

By Suddi9

Leave a Reply

Your email address will not be published. Required fields are marked *