ಗುರುಪುರ ಪಂಚಾಯತ್‌ನಲ್ಲಿ ಕಟ್ಟಡ
ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ
ಕೈಕಂಬ : ಗುರುಪುರ ಗ್ರಾಮ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್ ಮತ್ತು ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರ ಜಂಟಿ ಆಶ್ರಯದಲ್ಲಿ ಗುರುಪುರ ಪಂಚಾಯತ್ ಕಚೇರಿ ಸಭಾಗೃಹದಲ್ಲಿ ನೋಂದಾಯಿತ ಕಟ್ಟಡ ಮತ್ತು ನಿಮಾಣ ಕಾರ್ಮಿಕರು ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ ಜೂ. ೨೬ರಂದು ನಡೆಯಿತು.

ಉಡುಪಿಯ ಆದರ್ಶ ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್‌ನ ವೈದ್ಯರು ಹಾಗೂ ಸಿಬ್ಬಂದಿ ವರ್ಗವು ನೂರಾರು ಕಟ್ಟಡ ಕಾರ್ಮಿಕರು ಮತ್ತು ಅವಲಂಬಿತರ ಸಂಪೂರ್ಣ ದೈಹಿಕ ಪರೀಕ್ಷೆ, ಲಿವರ್ ಕಾರ್ಯ ಪರೀಕ್ಷೆ, ದೃಷ್ಟಿ ತಪಾಸಣೆ, ಮೂತ್ರಪಿಂಡ ಕಾರ್ಯ ಪರೀಕ್ಷೆ ಮೂತ್ರ ಪರೀಕ್ಷೆಯಂತಹ ಹಲವು ರೀತಿಯ ಆರೋಗ್ಯ ತಪಾಸಣೆ ನಡೆಸಿದರು. ಸಂಜೆಯವರೆಗೆ ಶಿಬಿರ ನಡೆಯಿತು.
