ಗುರುಗಳನ್ನು ಪ್ರೀತಿಸಲು ಕಲ್ಲೂರಾಯ ವಿದ್ಯಾರ್ಥಿಗಳಿಗೆ ಕರೆ
ಕೈಕಂಬ: ಗುರುಗಳು ದೇವರಿಗೆ ಸಮಾನ, ಗುರುಗಳನ್ನು ಪ್ರೀತಿಸುವ ವಿದ್ಯಾರ್ಥಿಯನ್ನು ವಿಧೇಯ ವಿದ್ಯಾರ್ಥಿ ಎಂದು ಗುರುತಿಸಬಹುದು. ಹೀಗೆ ಗುರುಗಳನ್ನು ಪ್ರೀತಿಸಿ ಗೌರವಿಸುವ ವಿದ್ಯಾರ್ಥಿಯ ಜ್ನಾನದ ಮಟ್ಟ ಹೆಚ್ಚಾಗುತ್ತದೆ ಎಂದು ಕಲಾವಿದ ಹಾಗೂ ಉಪನ್ಯಾಸಕರಾದ ವಾದಿರಾಜ ಕಲ್ಲೂರಾಯ ಹೇಳಿದ್ದಾರೆ.
ಅವರು ಡಿ.2ರಂದು ಗುರುಪುರ ಕೈಕಂಬದ ರೋಸಾಮಿಸ್ತಿಕಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇದರ ವಾರ್ಷಿಕೋತ್ಸವ ಸಮಾರಂಭದಂದು ನುಡಿದಿದ್ದಾರೆ.
ನಂತರ ಮಾತಾಡಿದ ಅವರು ಇತ್ತೀಚಿನ ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ದಿಕ್ಕುತಪ್ಪುತ್ತಿದ್ದು, ಅವರನ್ನು ಏಕವಚನದಿಂದ ಸಂಬೋಧಿಸುವ ಪರಿಪಾಠ ಬೆಳೆಯುತ್ತಿದೆ. ಆದರೆ ಗುರುಗಳನ್ನು ಪ್ರೀತಿಸಿ ವಂದಿಸುವ ವಿದ್ಯಾರ್ಥಿಗಳು ಸತ್ಪ್ರಜೆಗಳಾಗಿ ಮೂಡಿಬರುವಲ್ಲಿ ಯಾವುದೇ ಸಂಶಯವಿಲ್ಲ. ಎಂದು ನುಡಿದ ಅವರು ರೋಸಾಮಿಸ್ತಿಕಾ ಶಾಲೆಗೂ ನನಗೂ ಒಂದು ಅವಿನಾಭಾವ ಸಂಬಂಧವಿದೆ. ನಾನೂ ಕೂಡಾ ಇದೇ ಶಾಲೆಯಲ್ಲಿ ಜ್ಞಾನಾರ್ಜನೆ ಪಡೆದಿದ್ದು, ನನ್ನ ಬೆಳವಣಿಗೆಯಲ್ಲಿ ಇಲ್ಲಿನ ಗುರುಗಳ ಪಾತ್ರವಿದೆ ಎಂದು ಅವರು ತನ್ನ ಶಿಕ್ಷಣದ ದಿನಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸರ್ ಎಂ. ಲಿಲ್ಲಿಸ್ ಬಿ.ಎಸ್. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾರಿಷ್ ಕೌನ್ಸಿನ ಕಾರ್ಯದರ್ಶಿ ಮಿಸ್ ಲಿಲ್ಲಿ ಮಥಾಯಿಸ್, ಗುರುಕಂಬ್ಳ ಶಾಲೆಯ ನಿವೃತ್ತ ಉಪನ್ಯಾಸಕರಾದ ಮಾದಮಯ್ಯ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಕಿನ್ನಿಕಂಬಳ ರಾಜೇಂದ್ರ ಮುಂತಾದವರು ಭಾಘವಹಿಸಿದ್ದರು.
ನಂತರ ಶಾಲೆಯ ವರದಿವಾಚನ, ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಜೊತೆಗೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ರಾಜೇಂದ್ರ ಸ್ವಾಗತಿಸಿದರು.

19

17

18

15

14

 

 

2

3

4

5

6

7

8

9

10

11

12

13

 

 

16

 

 

 

20

 

 

rosamystika (1)

rosamystika (2)

rosamystika (3)

rosamystika (4)

rosamystika (5)

 

 

By Suddi9

One thought on “ಕೈಕಂಬ: ರೋಸಾಮಿಸ್ತಕಾ ಶಾಲೆಯ ವಾರ್ಷಿಕೋತ್ಸವ”

Leave a Reply

Your email address will not be published. Required fields are marked *