ಕೈಕಂಬ: ಕರಿಯಂಗಳ ಗ್ರಾಮದ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ವತಿಯಿಂದ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಚಾಲನೆ ನೀಡಿದರು. ಶಕ್ತಿ ಕೇಂದ್ರದ ಅಧ್ಯಕ್ಷ ವೆಂಕಟೇಶ್ ನಾವುಡ ಸ್ಥಾನೀಯ ಸಮಿತಿಯ ಅಧ್ಯಕ್ಷ ಯಶವಂತ ಪೊಳಲಿ, ಪ್ರ. ಕಾರ್ಯದರ್ಶಿ ಯಶೊಧರ, ಅಮ್ಮುಂಜೆ ಬಿಜೆಪಿ ಸ್ಥಾನೀಯ ಸಮಿತಿಯ ಕಾರ್ಯದರ್ಶಿ ಆನಂದ ಬೆಳ್ಚಡ , ಪಂ.ಸದಸ್ಯ ವಾಮನ ಪೂಜಾರಿ, ಚಂದ್ರಶೇಖರ ರಾವ್ , ಗೋಪಾಲ ಬಂಗೇರಾ ಮುಂತಾದವರು ಉಪಸ್ಥಿತರಿದ್ದರು.

