ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಪ್ರಾಥಮಿಕ ಶಾಲೆ ಇದರ ವಾರ್ಷಿಕೋತ್ಸವವು ಡಿ.7ರ ಆದಿತ್ಯವಾರದಂದು ಸಂಜೆ ಗಂಟೆ 4ರಿಂದ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಸಭಾಂಗಣ ಪಲ್ಲಿಪಾಡಿ-ಕರಿಯಂಗಳ ಇಲ್ಲಿ ನಡೆಯಲಿದೆ. ಇದರ ಪ್ರಯುಕ್ತ `ಒಂತೆ ತೆಲಿಪುಲೆ; ಒಂತೆ ಬುಲಿಪುಲೆ’ ಹಾಗೂ ಕೆಂಚನ ಗಮ್ಮತ್ತ್ ಎಂಬ ತುಳು ನಾಟಕ ಪ್ರಸಾರಗೊಳ್ಳಲಿದೆ.

telith saile

ಕಾರ್ಯಕ್ರಮದ ಅಧ್ಯಕ್ಷರಾಗಿ ಅರಣ್ಯ ಸಚಿವ ಬಿ. ರಮಾನಾಥ ರೈ, ಉದ್ಘಾಟಕರಾಗಿ ಜಿ. ಪಂಚಾಯತ್ ಸದಸ್ಯೆ ಪದು ಕ್ಷೇತ್ರದ  ಜಯಶ್ರೀ ಕೆ.ಎ., ಮಖ್ಯ ಅತಿಥಿಳಾಗಿ ಕರಿಯಂಗಳ ಗ್ರಾ. ಪಂ. ಅಧ್ಯಕ್ಷರಾದ ಡಿ. ಚಂದ್ರಶೇಖರ ಭಂಡಾರಿ. ಕರಿಯಂಗಳ ಗಾ.ಪಂ.ನ ಪಿಡಿಓ ನವೀನ್ ಭಂಡಾರಿ, ತಾ. ಪಂ ಸದಸ್ಯರಾದ ಗುಣವತಿ. ಕ್ಷೇತ್ರ ಶಿಕ್ಷಣಧಿಕಾರಿಗಳು ಬಂಟ್ವಾಳ ಇದರ ಶೇಷಶಯನ ಕಾರಿಂಜ, ಸಿ.ಆರ್.ಪಿ.ಬಿ ಮೂಡ ವೆಂಕಟ ರಾವ್, ದಾರಿಮಿ ಪಲ್ಲಿಪಾಡಿ. ಮಾಮು ಬ್ಯಾರಿ. ಉದ್ಯಮಿ ಮೂಡಬಿದ್ರಿ ರುಕ್ಕಯ್ಯ ಎನ್ ಬಂಗೇರಾ, ಬಡಗಬೆಳ್ಳೂರು ಗ್ರಾ. ಪಂ. ಸದಸ್ಯರಾದ ಭಾಸ್ಕರ. ಕರಿಯಂಗಳ ಗ್ರಾ. ಪಂ. ಸದಸ್ಯರಾದ ರಾಜು ಕೋಟ್ಯಾನ್, ಉಮೇಶ್ ಆಚಾರ್ಯ, ರೇಖಾ. ಮಾಜಿ ಅಧ್ಯಕ್ಷರು ಕರಿಯಂಗಳ ಗ್ರಾಮ ಪಂಚಾಯತ್ ಬಾಬು ಶೆಟ್ಟಿ, ಅರ್ಚಕರಾದ ಪಿ.ರಾಮಚಂದ್ರ ತುಂಗ, ಶುಭಲಕ್ಷ್ಮಿ ಟ್ರಾವೆಲ್ಸ್ ಪಚ್ಚಿನಡ್ಕ ಇದರ ಅಧ್ಯಕ್ಷರಾದ ಭುವನೇಶ್, ನಡುಮನೆ ಕರಿಯಂಗಳ ಪ್ರಗತಿಪರ ಕೃಷಿಕರು ಗಂಗಯ್ಯ ಪೂಜಾರಿ ಹೀಗೆ ಹಲವಾರು ಮಂದಿ ಆಗಮಿಸಲಿದ್ದಾರೆ. ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ. ಎಂದು ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *