ಸಜೀಪಮನ್ನೂರು ರಾಜಶೇಖರನಾಯಕ್ ನಿಧನ
ಬಂಟ್ವಾಳ: ಕಾಂಗ್ರೆಸ್ ಮುಖಂಡ ಸಜೀಪಮನ್ನೂರು ಗ್ರಾಮದ ಖಂಡಿಗ ನಿವಾಸಿ ರಾಜಶೇಖರನಾಯಕ್ ( 74) ಅವರು ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.
ಕೃಷಿಕರಾಗಿರುವ ಅವರು ಜಾತ್ಯಾತೀತಮನೋಭಾವದವರಾಗಿದ್ದು,ಆರಂಭಿಕವಾಗಿಜಾತ್ಯಾತೀತಜನತಾದಳದೊಂದಿಗೆ ಗುರುತಿಸಿಕೊಂಡಿದ್ದರು.ಬಳಿಕ ರಾಜಕೀಯ ಬೆಳವಣಿಗೆಯೊಂದರಲ್ಲಿ ಜನತಾದಳವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಅನಾರೋಗ್ಯ
ದಿಂದಾಗಿ ಪಕ್ಷದ ಚಟುವಟಿಕೆಯಿಂದ ದೂರ ಇದ್ದರು.ಸಜ್ಜನ ರಾಜಕಾರಣಿಯಾಗಿದ್ದ ಅವರು
ಬಂಟ್ವಾಳ ಕೃಷಿಕ ಸಮಾಜದ ಚುನಾಯಿತ ಸದಸ್ಯರಾಗಿದ್ದರು. ಸಜೀಪಮೂಡ ಯುವಕಮಂಡಲದ ವತಿಯಿಂದ ನಡೆಯುವ ಶ್ರೀಶಾರದೋತ್ಸವ ಸಮಿತಿ, ಧಾರ್ಮಿಕ ಚಟುವಟಿಕೆಯಲ್ಲು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ ,ಇಬ್ಬರು ಪುತ್ರರು,ಒರ್ವ ಪುತ್ರಿ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.ಇವರ ನಿಧನಕ್ಕೆ ಮಾಜಿ ಸಚಿವ ರಮಾನಾಥ ರೈ,ಬೂಡಾ ಅಧ್ಯಕ್ಷ ಬೇಬಿಕುಂದರ್ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.