ರಾಯಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಂಭ್ರಮದ ದೃಢಕಲಶಾಭಿಷೇಕ
ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ದೈಲ ಎಂಬಲ್ಲಿ ಸುಮಾರು ರೂ 5 ಕೋಟಿ ವೆಚ್ಚದಲ್ಲಿ ಸಂಪೂರ್ಣ ಶಿಲಾಮಯವಾಗಿ ಪುನರ್ ನಿಮರ್ಾಣಗೊಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಕಾರ್ಯಕ್ರಮ ಗುರುವಾರ ನಡೆಯಿತು. ಕ್ಷೇತ್ರದ ತಂತ್ರಿ ಬಾಲಕೃಷ್ಣ ಪಾಂಗಣ್ಣಾಯರ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಡಿ.ರಾಮಚಂದ್ರ ಭಟ್ ಮತ್ತು ಅರ್ಚಕ ದಿನೇಶ್ ಭಟ್ ಮತ್ತಿತರ ತಂಡವು ವಿವಿಧ ಪೂಜಾ ಕಾರ್ಯಕ್ರಮ ನೆರವೇರಿಸಿದರು. ದೇವರ ವಿಗ್ರಹಕ್ಕೆ ದೃಢಕಲಶಾಭಿಷೇಕ, ವಿಶೇಷ ಮಹಾಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಭೇಟಿ ನೀಡಿದರು. ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಗೌರವಾಧ್ಯಕ್ಷ ರಾಜೇಶ್ ಶೆಟ್ಟಿ ಶೀತಾಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸದಾನಂದ ಗೌಡ ಮತ್ತಾವು, ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಜೀಣರ್ೋದ್ಧಾರ ಸಮಿತಿ ಪ್ರಧಾನ ಕಾರ್ಯದಶರ್ಿ ಚಂದ್ರಶೇಖರ ಗೌಡ ಕಾರಂಬಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದಶರ್ಿ ಸಂತೋಷ್ ಕುಮಾರ್ ಚೌಟ ಮಡಂದೂರು, ಭಜನಾ ಮಂಡಳಿ ಅಧ್ಯಕ್ಷ ರಾಜೇಶ್ ಶಿವನಗರ, ಪ್ರಮುಖರಾದ ಸದಾನಂದ ಶೆಟ್ಟಿ ಮುಡ್ರಾಯಿಬೀಡು, ಜಯಕರ ಪಕ್ಕಳ, ರತ್ನಕುಮಾರ್ ಚೌಟ, ಪ್ರದೀಪ್ ಮಿಯಾಲು, ಸಮಿತ್ ಶಿವನಗರ, ಗಣೇಶ್ ಬರೆಬಾಯಿ, ದಿನೇಶ್ ಸುವರ್ಣ ಮತ್ತಿತರರು ಇದ್ದರು.