ಪೊಳಲಿ ಸರಕಾರಿ ಪ್ರೌಢಶಾಲೆ ಪ್ರಥಮ ಪೋಷಕರ ಸಭೆ,ವಿದ್ಯಾರ್ಥಿಗಳಿಗೆ ಗೌರವಾರರ್ಪಣೆ
ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯ ೨೦೨೪ ೨೫ ನೇ ಸಾಲಿನ ಪ್ರಥಮ ಪೋಷಕರ ಸಭೆಯು ಸರ್ವಮಂಗಳ ಹಾಲ್ ನಲ್ಲಿ ಜೂ.೮ರಂದು ಶನಿವಾರ ನಡೆಯಿತು.
ರಾಮಕೃಷ್ಣ ತಪೋವನದ ಸ್ವಾಮೀ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ದೀಪ ಪ್ರಜ್ವಲನೆ ಮಾಡಿ ಮಕ್ಕಳ ಪೋಷಕರನ್ನುಧ್ದೇಶಿಸಿ ಮಾತನಾಡಿದರು. ಶಾಲೆಯ ಪ್ರಗತಿ ನೋಟದ ಬಗ್ಗೆ ಮತ್ತು ಶಾಲೆಯ ನಿಯಮಾವಳಿಗಳ ಬಗ್ಗೆ ರಂಜಿತ ವಿವರಿಸಿದರು. ಪೋಷಕರಾದ ಅರುಣೋದಯ ಮತ್ತು ರಶ್ಮಿ ಶಾಲೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ೨೦೨೩ ೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪೋಷಕರ ಸಮ್ಮುಖದಲ್ಲಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ವೆಂಕಟೇಶ ನಾವಡ ಪೊಳಲಿ ವಹಿಸಿದ್ದರು. ವೇದಿಕೆಯಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಧಾಲೋಕೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯಶವಂತ ಕೋಟ್ಯಾನ್ ಪೊಳಲಿ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಭರಣಿ,ಮುರಳಿದರ ಆಚಾರ್ಯ ಉಪಸ್ಥಿತರಿದ್ದರು
ಶಾಲೆಯ ಮುಖ್ಯಸ್ಥರಾದ ಸುಬ್ರಾಯ ಪೈ ಎನ್ ಸ್ವಾಗತಿಸಿದರು. ಶಕ್ಷಕಿ ಪೂರ್ಣಿಮಾ ವಂದಿಸಿದರು.