ತೆಂಕ ಬೆಳ್ಳೂರು ಶಿವಶಕ್ತಿ ಕೃಷಿಕರ ಸಂಘ ವತಿಯಿಂದ “ಪ್ರತಿಭಾ ಪುರಸ್ಕಾರ”
ಪೊಳಲಿ: ಶಿವಶಕ್ತಿ ಕೃಷಿಕರ ಸಂಘ ತೆಂಕ ಬೆಳ್ಳೂರು ಇವರ ವತಿಯಿಂದ ಸಂಘದ ಕೃಷಿಕರ ಮಕ್ಕಳಿಗೆ ನೀಡುವ “ಪ್ರತಿಭಾ ಪುರಸ್ಕಾರ” ಕಾರ್ಯಕ್ರಮವು ಶ್ರೀ ಕಾವೇಶ್ವರ ದೇವಸ್ಥಾನದ ಶಿವಶಕ್ತಿ ಸಭಾಭವನದಲ್ಲಿ ಇತ್ತಿಚೇಗೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಶಿವಶಕ್ತಿ ಕೃಷಿಕರ ಸಂಘದ ಅಧ್ಯಕ್ಷ ನಿರಂಜನ್ ಸೇಮಿತ ಕುಂದಬೆಟ್ಟು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ನಾಯಕ್ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ದಿಶಾ ಟ್ರಸ್ಟ್ ಇದರ ಕ್ಷೇತ್ರ ಸಂಯೋಜಕಿ ಹರಿಣಾಕ್ಷಿ ಮಾತನಾಡಿ ತೀರಾ ಬಡತನದಲ್ಲಿರುವ ಕೃಷಿಕರ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಒಂದು ಅರ್ಥ ಪೂರ್ಣವಾದ ಕಾರ್ಯಕ್ರಮ ಅವರ ಮುಂದಿನ ಕಲಿಕೆಗೆ ಪ್ರಯೋಜನವಾಗುತ್ತದೆ ಉತ್ತಮ ಅಂಕ ಗಳಿಸಿದ ಮಕ್ಕಳನ್ನು ಅಭಿನಂದಿಸಿದರು.

ಶಿವಶಕ್ತಿ ಸಂಘದ ಮಾಜಿ ಅಧ್ಯಕ್ಷ ಗಂಗಾಧರ್ ರೈ ಕಮ್ಮಾಜೆ ಪ್ರಾಸ್ತಾವಿಕವಾಗಿ ಮಾತನಾಡಿ ಕಲಿಕೆಯಲ್ಲಿ ಮುಂದಿರುವ ಕೃಷಿಕರ ಮಕ್ಕಳನ್ನು ಗುರುತಿಸಿ ಗೌರವಿಸಿದೆ ಅವರ ಮುಂದಿನ ಭವಿಷ್ಯ ಉಜ್ವಲ ವಾಗಲಿದೆ ಎಂಬ ಉದ್ದೇಶದಿಂದ ಸಂಘದ ವತಿಯಿಂದ ಈ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ಕೃಷಿಕರ ಮಕ್ಕಳಾದ ಕೌಶಲ್ ೮ನೇ ತರಗತಿ, ಸುಮಿತ್ ೯ನೇ ತರಗತಿ, ತಿಲಕ್ ೮ನೇ ತರಗತಿ ನಿಧಿಶ್ ೮ನೇ ತರಗತಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ೧೦ನೇ ತರಗತಿಯಲ್ಲಿ ೯೫% ಅಂಕ ಗಳಿಸಿದ ಪ್ರಜ್ಞಾ ಭಟ್ ಮತ್ತು ೯೨% ಅಂಕ ಗಳಿಸಿದ ಪ್ರತೀಕ್ಷಾ ಪೂಜಾರಿ ಇವರನ್ನು ಪ್ರತಿಭಾ ಪುರಸ್ಕಾರ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಿವಶಕ್ತಿ ಕೃಷಿಕರ ಸಂಘದ ಉಪಾಧ್ಯಕ್ಷರಾದ ವಿಲಿಯಂ ಡಿ ಕೋಸ್ತಾ ಮಾಹಿಲಾಕೋಡಿ, ಕಾರ್ಯದರ್ಶಿ ಸುಮಾವತಿ ದೋಟ, ಜೊತೆ ಕಾರ್ಯದರ್ಶಿ ಗಂಗಯ್ಯ ಪೂಜಾರಿ ಕಮ್ಮಾಜೆ, ಹಾಗೂ ಸಂಘದ ಸದಸ್ಯರಾದ ನಿರಂಜನ್ ದಾಸ್ ಭಂಡಾರಿ ಕಮ್ಮಾಜೆ ಉಪಸ್ಥಿತರಿದ್ದರು ಪುಷ್ಪರಾಜ್ ಶೆಟ್ಟಿ ಕಮ್ಮಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



