ಎಂಎಲ್‌ಸಿ ಐವನ್ ಡಿ’ಸೋಜರಿಂದ ಕಾಮಗಾರಿ ವೀಕ್ಷಣೆ
ವಾಮಂಜೂರು : ಕಾಮಗಾರಿ ಗೊಂದಲ, ಕೆತ್ತಿಕಲ್ ಗುಡ್ಡ ಕುಸಿತ ಭೀತಿ #ಎನ್‌ಎಚ್ ಅಧಿಕಾರಿಗಳೊಂದಿಗೆ ವಾಮಂಜೂರು ನಾಗರಿಕರ ಸಂವಾದ
ಕೈಕAಬ : ರಾಷ್ಟಿçÃಯ ಹೆದ್ದಾರಿ ೧೬೯ರ ವಾಮಂಜೂರು ಚರ್ಚ್, ಮಸೀದಿ ಮತ್ತು ಕೆತ್ತಿಕಲ್‌ನಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಕಾಮಗಾರಿ ಬಗ್ಗೆ ಸ್ಥಳೀಯ ನಾಗರಿಕರಲ್ಲಿ ಉಂಟಾಗಿರುವ ತೀವ್ರ ಗೊಂದಲ ಬಗೆಹರಿಸುವ ನಿಟ್ಟಿನಲ್ಲಿ ಜೂ. ೧೧ರಂದು ಸಂಜೆ ವಾಮಂಜೂರು ಚರ್ಚ್ ಸಭಾಗೃಹದಲ್ಲಿ ಎನ್‌ಎಚ್ ಅಧಿಕಾರಿಗಳು ಎಂಎಲ್‌ಸಿ ಐವನ್ ಡಿ’ಸೋಜ ಅವರ ಸಮ್ಮುಖದಲ್ಲಿ ಸ್ಥಳೀಯರಿಗೆ ಸಮಗ್ರ ಮಾಹಿತಿ ನೀಡಿದರು.

ಎನ್‌ಎಚ್‌ನ ಸೈಟ್ ಇಂಜಿನಿಯರ್ ನಾಸಿರ್ ಅವರು ಚತುಷ್ಪಥ ಕಾಮಗಾರಿ ಬಗ್ಗೆ ಮಾಹಿತಿ ನೀಡಿ, ವಾಮಂಜೂರು ಚರ್ಚ್ ಬಳಿ ರಸ್ತೆ ಎತ್ತರಗೊಂಡರೂ ಚರ್ಚ್ನ ಎದುರು ರ‍್ಯಾಂಪ್ ನಿರ್ಮಿಸಲಾಗುತ್ತದೆ. ಪಕ್ಕದ ಚರ್ಚ್ ಕಾಂಪ್ಲೆಕ್ಸ್ನ ತಳ ಭಾಗದ ಅಂಗಡಿಗಳಲ್ಲಿ ಕೊನೆಯ ಒಂದು ಅಂಗಡಿ ತೆಗೆಯಲಾಗುವುದು. ಉಳಿದಂತೆ ಚರ್ಚ್ನಿಂದ ಮಂಗಳಜ್ಯೋತಿವರೆಗೆ ಉಡುಪಿಯ ಹೆದ್ದಾರಿಯಂತೆ ರಸ್ತೆ ಎತ್ತರೀಕರಿಸಿ(ಓವರ್ ಪಾಸ್‌ನಂತೆ) ಕಾಮಗಾರಿ ನಡೆಯಲಿದೆ ಎಂದರು.

ವಾಮAಜೂರು ಮಸೀದಿ ಬಳಿಯ ರಸ್ತೆ ಸಮಸ್ಯೆಗೆ ಪರಿಹಾರ ಹಾಗೂ ಅತಿಯಾಗಿ ಮಣ್ಣು ಕೊರೆಯಲಾದ ಕೆತ್ತಿಕಲ್ ಗುಡ್ಡ ಪ್ರದೇಶದಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಸಮಸ್ಯೆ ತಡೆಗಟ್ಟುವಂತೆ ಗುತ್ತಿಗೆದಾರ ಕಂಪೆನಿ ಡಿಬಿಎಲ್‌ಗೆ ಸೂಚಿಸಲಾಗುವುದು ಎನ್‌ಎಚ್ ಇಂಜಿನಿಯರ್‌ಗಳು ಹೇಳಿದರು.

ಮೊದಲಿಗೆ ಚರ್ಚ್ ಸಭಾಗೃಹದಲ್ಲಿ ಎಂಎಲ್‌ಸಿ ಐವನ್ ಡಿ’ಸೋಜ ಉಪಸ್ಥಿತಿಯಲ್ಲಿ ನಾಗರಿಕರೊಂದಿಗೆ ನಡೆದ ಸಂವಾದದ ವೇಳೆ ಚರ್ಚ್ನ ಧರ್ಮಗುರು ಜೇಮ್ಸ್ ಡಿ’ಸೋಜ ಮತ್ತು ಧರ್ಮಗುರು ಐವನ್ ಡಿ’ಸೋಜ, ಕಾಂಗ್ರೆಸ್ ಮುಖಂಡ ಮೆಲ್ವಿನ್ ಡಿ’ಸೋಜ, ವಾಮಂಜೂರು ವಲಯ ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು, ಸ್ಟ್ಯಾನಿ ವಾಮಂಜೂರು, ಎನ್‌ಎಚ್ ಟೀಂ ಇಂಜಿನಿಯರ್ ಸುರೇಂದ್ರ ಪತ್ತಾರ್ ಹಾಗೂ ಸ್ಥಳೀಯ ಅಂಗಡಿ ಮಾಲಕರು ಉಪಸ್ಥಿತರಿದ್ದರು. ಚಾರ್ಲ್ಸ್ ಪಾಯಸ್ ಸ್ವಾಗತಿಸಿ ವಂದಿಸಿದರು. ಬಳಿಕ ಐವನ್ ಡಿ’ಸೋಜ ಹಾಗೂ ಇತರರು ಹೆದ್ದಾರಿ ಕಾಮಗಾರಿ ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.