ಕಿನ್ನಿಕಂಬಳದ ಸ್ಮಾರ್ಟ್ ನರ್ಸರಿ ಆಂಗ್ಲ
ಮಾಧ್ಯಮ ಸ್ಕೂಲ್ ಪ್ರಾರಂಭೋತ್ಸವ
ಕೈಕಂಬ : ಗುರುಪುರ ಕೈಕಂಬ ಕಿನ್ನಿಕಂಬಳದ ಸ್ಮಾರ್ಟ್ ನರ್ಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. ೭ರಂದು ೨೦೨೪-೨೫ನೇ ಸಾಲಿನ ಶೈಕ್ಷಣಿಕ ಪ್ರಾರಂಭೋತ್ಸವ ನಡೆಯಿತು. ಶಾಲಾ ಸಂಚಾಲಕಿ, ಶಿಕ್ಷಕಿಯರು ಮತ್ತಿತರರು ಪುಟಾಣಿ ಮಕ್ಕಳಿಗೆ ಆರತಿ ಬೆಳಗಿಸಿ, ಪ್ರಾರ್ಥನೆಯೊಂದಿಗೆ ತರಗತಿಗೆ ಚಾಲನೆ ನೀಡಿದರು.

ಪಡುಪೆರಾರ ಗ್ರಾಮ ಪಂಚಾಯತ್ ಪಿಡಿಒ ಉಗ್ಗಪ್ಪ ಮೂಲ್ಯ ಪುಟಾಣಿ ಮಕ್ಕಳನ್ನುದ್ದೇಶಿಸಿ ಮಾತನಾಡಿ, ಶಾಲಾ ದಿನಗಳಲ್ಲಿ ನಮಗೆ ಈಗಿನ ಮಕ್ಕಳಂತೆ ಯಾವುದೇ ಸವಲತ್ತು, ಸಂಭ್ರಮ ಇರಲಿಲ್ಲ. ಈ ಮಕ್ಕಳು ಪುಣ್ಯವಂತರು. ಈ ಸಂಸ್ಥೆ ನರ್ಸರಿಯಿಂದ ಪ್ರಾಥಮಿಕ ಶಾಲೆಯಾಗಿ ಬೆಳೆದು, ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿ. ವೈಯಕ್ತಿಕ ನೆಲೆಯಲ್ಲಿ ಶಾಲೆಗೆ ಅಗತ್ಯವಿರುವ ನೆರವು ನೀಡುವೆ ಎಂದರು.
ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಪಡುಪೆರಾರ ಗ್ರಾಪಂ ಸದಸ್ಯರೂ ಆಗಿರುವ ಶಾಲಾ ಸಂಚಾಲಕಿ ವಿದ್ಯಾ ಜೋಗಿ ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಪಂಚಾಯತ್ ಸಿಬ್ಬಂದಿ ಭೋಜ ನಾಯ್ಕ್, ಶಾಲಾ ಶಿಕ್ಷಕಿಯರು, ಮಕ್ಕಳ ಪೋಷಕರು, ಹಿತೈಷಿಗಳು ಉಪಸ್ಥಿತರಿದ್ದರು. ಪತ್ರಕರ್ತ ಧನಂಜಯ ಗುರುಪುರ ವಂದಿಸಿದರು.
ಸ್ಮಾರ್ಟ್ ಸ್ಕೂಲ್ :
ಪರಿಸರದಲ್ಲಿ ಕಳೆದ ೧೫ ವರ್ಷದಿಂದ ಆರಂಭಿಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಈ ಸಂಸ್ಥೆಯಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿ ತರಗತಿಗಳಿವೆ. ಶಾಲೆಯಲ್ಲಿ ಸುಮಾರು ೫೦ ಪುಟಾಣಿಗಳು ಕಲಿಯುತ್ತಿದ್ದಾರೆ. ಪೋಷಕರ ಸಹಕಾರದಿಂದ ಸಂಸ್ಥೆ ಬೆಳೆದಿದೆ ಎಂದು ಶಾಲಾ ಸಂಚಾಲಕಿ ವಿದ್ಯಾ ಜೋಗಿ ವಿವರಿಸಿದರು.