ಕೈಕಂಬ : ಕಂದಾಯ ಇಲಾಖೆಯ ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ನಾಡ ಕಚೇರಿ ಉಪ-ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಗುಲಾಬಿ ಎಚ್., ಅವರು ಕಂದಾಯ ಇಲಾಖೆಯಲ್ಲಿ ೩೮ ವರ್ಷಗಳ ಸುದೀರ್ಘ ಸೇವೆ ಬಳಿಕ ಮೇ. ೩೧ರಂದು ಸೇವಾ ನಿವೃತ್ತಿ ಹೊಂದಿದರು.

ಮೇ. ೩೧ರಂದು ಮಂಗಳೂರು ತಾಲೂಕು ಕಚೇರಿ ಹಾಗೂ ಗುರುಪುರ ಹೋಬಳಿ ಸಿಬ್ಬಂದಿ ವರ್ಗವು ಸೇವಾ ನಿವೃತ್ತಿ ಹೊಂದಿದ ಗುಲಾಬಿ ಅವರಿಗೆ ಗುರುಪುರ ಕೈಕಂಬದಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿ, ಶಾಲು ಹೊದೆಸಿ ಸ್ಮರಣಿಕೆ ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಕಚೇರಿಯ ಉಪ-ತಹಶೀಲ್ದಾರ್ ಜಯಂತ್, ಗುರುಪುರ ಹೋಬಳಿಯ ಉಪತಹಶೀಲ್ದಾರ್ ಶಿವಪ್ರಸಾದ್, ನಿವೃತ್ತ ಉಪತಹಶೀಲ್ದಾರ್ಗಳಾದ ಗಂಗಾಧರ, ರಾಧಾಕೃಷ್ಣ, ಮಂಗಳೂರು ತಾಲೂಕು ಉಪತಹಶೀಲ್ದಾರ್ ಭೀಮಯ್ಯ, ಉಳ್ಳಾಲ ತಾಲೂಕು ಉಪತಹಶೀಲ್ದಾರ್ ನವನೀತ್, ಕೆಐಎಡಿಬಿನ ಮೆನೇಜರ್ ಆಸಿಫ್, ಗುರುಪುರ ಹೋಬಳಿಯ ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಕಂದಾವರ ಗ್ರಾಪಂ ಪಿಡಿಒ, ಅಧ್ಯಕ್ಷೆ, ಗುರುಪುರ ಹೋಬಳಿಯ ಗ್ರಾಮಾಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ನಾಡ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
